ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ)ಇದರ 7ನೆ ವಾರ್ಷಿಕ ಮಹಾಸಭೆ ಹಾಗೂ 72 ವರ್ಷ ತುಂಬಿದ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮ ಕುಲಾಲ ಸಮುದಾಯ ಭವನ ಪೊಸಳ್ಳಿ ಬಿ ಸಿ ರೋಡಿನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸೋಮಯ್ಯ ಹನೈನಡೆ ಯವರು ವಹಿಸಿ, ಸಂಘದ ಬೆಳವಣಿಗೆಗೆ ಎಲ್ಲರ ಸಹಾಯ ಸಹಕಾರ ಅಗತ್ಯ, ಈಗಾಗಲೇ ಸಂಘದ ಕಚೇರಿ ಹೊಂದಲು ನಿವೇಶನ ಹುಡುಕುತ್ತಿದ್ದು, ಸ್ವಂತ ಕಚೇರಿಯ ಮೂಲಕ ತೀರಾ ಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ವನ್ನು ದೀಪ ಹಚ್ಚಿ ಉದ್ಘಾಟಿಸಿ ಮಾತನಾಡಿದ ರಮೇಶ್ ಬಾಳೆಹಿತ್ಲು ಉದ್ಯಮಿ ಶಿಲ್ಪಾ ಪ್ರಾಡಕ್ಟ್ಸ ಬೆಂಗಳೂರು ಮಾತನಾಡಿ 60 ವರ್ಷ ತುಂಬಿ ಹಿರಿಯ ನಾಗರೀಕರಾದವರು, ನಂತರ ಎಷ್ಟೋ ಸಾಧನೆ ಗಳನ್ನು ಮಾಡಿದ ಮಹನೀಯರ ಉದಾಹರಣೆಗಳನ್ನು ನೀಡುತ್ತಾ ನಮ್ಮ ಮನಸ್ಸಿನಿಂದ ನಾವು ವೃದ್ಧರಲ್ಲ ಹಿರಿಯರು ಅನಿಸಿಕೊಂಡಾಗ ಸಮಾಜದ ಕಿರಿಯರಿಗೆ ಮಾರ್ಗದರ್ಶನ ಮಾಡಲು ಸಾಧ್ಯ, ಇಂದಿನ ಯುವಪೀಳಿಗೆಗೆ ಹಿರಿಯರ ಮಾರ್ಗದರ್ಶನವಿಲ್ಲದೆ ದಾರಿ ತಪ್ಪುತ್ತಿರುವುದನ್ನು ಕಾಣಬಹುದಾಗಿದೆ.ಇದಕ್ಕೆಲ್ಲ ಇಂತಹ ಸಂಘದ ಮಾರ್ಗದರ್ಶನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ರಮೇಶ್ ಸಂಚಯಗಿರಿ ಅಧ್ಯಕ್ಷರು ಕುಲಾಲ ಸುಧಾರಕ ಸಂಘ ಬಂಟ್ವಾಳ, ಸುಮಿತ್ ಸಾಲಿಯಾನ್ ಸೋರ್ನಾಡ್ ಅಧ್ಯಕ್ಷರು ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ ಭಾಗವಹಿಸಿದ್ದರು. 72 ವರ್ಷ ಪ್ರಾಯವಾದ ಪದ್ಮನಾಭ ಎಂ, ಟಿ ಶೇಷಪ್ಪ
ಮಾಸ್ಟರ್,ಕೃಷ್ಣಪ್ಪ ಬಡ್ಡಕಟ್ಟೆ,ರಾಮಚಂದ್ರ ಮಾಸ್ಟರ್,ಭೋಜ ಬಂಗೇರ, ಧರ್ಮಣ ಬಡ್ಡಕಟ್ಟೆ, ಗಂಗಾಧರ ಮಾಸ್ಟರ್ ಹಾಗೂ ಪ್ರತಿಭಾವಂತ ಬಾಲಕಿ ಕು. ಕೃತಿ ಬಿ ರವರನ್ನು ವೇದಿಕೆಯಲ್ಲಿ ಹಾರ, ಶಾಲು, ಪೇಟ,ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನಿತರ ವಿವರಗಳನ್ನು ಉಪಾಧ್ಯಕ್ಷರಾಧ ಶ್ರೀಮತಿ ರತ್ನಾವತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸೋಮಪ್ಪ ಮೂಲ್ಯ, ಎಂ ನಾರಾಯಣ ಮಾಸ್ಟರ್, ರಾಮ ಮೂಲ್ಯ, ಶಾಂಭವಿ ಹನೈನಡೆ ಯವರು ವಾಚಿಸಿದರು. ವರದಿ ವರ್ಷದಲ್ಲಿ ಅಗಲಿದ ಸದಸ್ಯರಾದ ಭೋಜ ಮೂಲ್ಯ ಕುರ್ನಾಡ್, ಗೋಪಾಲ ಮಾಸ್ಟರ್ ಇರಾ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ವಿವರವನ್ನು ನಾರಾಯಣ ಮೂಲ್ಯ ಭಂಡಾರಿಬೆಟ್ಟು ನೀಡಿದರು. ಸನ್ಮಾನಿತರ ಪರವಾಗಿ ಪದ್ಮನಾಭ ಎಂ ಮತ್ತು ರಾಮಚಂದ್ರ ಮಾಸ್ಟರ್ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀಮತಿ ಶಾಂಭವಿ ಹನೈನಡೆ ಪ್ರಾರ್ಥನೆ ಹಾಡಿದರು. ಜತೆ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು.ಗೌರವಾಧ್ಯಕ್ಷ ಟಿ ಶೇಷಪ್ಪ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌ.ಪ್ರ. ಕಾರ್ಯದರ್ಶಿ ಶ್ರೀನಿವಾಸ ಖಂಡಿಗ ವರದಿ ಮಂಡಿಸಿದರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿದರು.ವೇದಿಕೆಯಲ್ಲಿ ಉಪಾಧ್ಯಕ್ಷರಾದ ವಿಠ್ಠಲ ಮೂಲ್ಯ, ಸ್ಥಾಪಕಧ್ಯಕ್ಷರಾದ ಸುಂದರ್ ಬಿ ಕುಲಾಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶೀನ ಮೂಲ್ಯ, ನೀಲಪ್ಪ ಸಾಲಿಯಾನ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಸಾಲಿಯಾನ್ ಧನ್ಯವಾದ ಸಲ್ಲಿಸಿದರು. ಎಚ್ ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು.
















