Coastal Bulletin

ಮಂಗಳೂರು: ಯಕ್ಷಗಾನದ 'ಅಭಿನವ ವಾಲ್ಮೀಕಿ' ಖ್ಯಾತಿಯ,ಭಾಗವತರು, ವೇಷಧಾರಿ, ಪ್ರಸಂಗಕರ್ತ ಸೇರಿದಂತೆ ಯಕ್ಷಗಾನದ ವಿವಿಧ ರಂಗದಲಿ ಸವ್ಯಸಾಚಿ ಪ್ರಸಿದ್ಧರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (65) ಅಲ್ಪಕಾಲದ ಅಸೌಖ್ಯದಿಂದ ನಿನ್ನೆ (ಶನಿವಾರ) ರಾತ್ರಿ ನಿಧನರಾಗಿದ್ದಾರೆ.ಇವರು ಪತ್ನಿ ಶೋಭಾ ಪೂಂಜ, ಮತ್ತು ಪುತ್ರರಾದ ಜೀವಿತೇಶ್ ಪೂಂಜಾ ಪರೀಕ್ಷಿತ್ ಪೂಂಜರನ್ನು ಅಗಲಿದ್ದಾರೆ.


ಪುರುಷೋತ್ತಮ ಪೂಂಜರು, ಜೂನ್‌ 21, 1953ರಲ್ಲಿ ಮಂಗಳೂರು‌ ತಾಲೂಕಿನ ಮಂಜನಾಡಿಯ ಬೊಟ್ಟಿಕೆರೆಯಲ್ಲಿ ಜನಿಸಿದರು.ಇವರ ತಂದೆ ದಿ. ಬಿ. ತ್ಯಾಂಪಣ್ಣ ಪೂಂಜ ಮತ್ತು ತಾಯಿ ಜಲಜಾ ಪೂಂಜ. ಬಿಎಸ್ಸಿ ಪದವೀಧರರಾದ ಅವರು ಆನೆಗುಂಡಿ

ಗಣಪತಿ ಭಟ್‌ ಮತ್ತು ಹೊಸಹಿತ್ಲು ಮಹಾಲಿಂಗಭಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹಿಮ್ಮೇಳ-ಮುಮ್ಮೇಳಗಳೆರಡನ್ನೂ ಕಲಿತು 'ಸವ್ಯಸಾಚಿ' ಎನಿಸಿದರು. ಉದ್ಯೋಗ ನಿಮಿತ್ತ ಮುಂಬಯಿಯಲ್ಲಿದ್ದ ಅವರು ನೂರಾರು ಶಿಷ್ಯರನ್ನು ಸಿದ್ಧಗೊಳಿಸಿದ್ದಾರೆ. ಅವರೊಬ್ಬ ಸಮರ್ಥ ವೇಷಧಾರಿ, ನಿರ್ದೇಶಕ, ಚೆಂಡೆ-ಮದ್ದಳೆ ವಾದಕ, ಭಾಗವತ ಮತ್ತು ಪ್ರಸಂಗಕರ್ತರಾಗಿದ್ದಾರೆ.

Leave a Comment