Coastal Bulletin

ಬೆಂಗಳೂರು : ಸಿಎಂ ಆದಿಯಾಗಿ ಸಚಿವರು, ರಾಜಕೀಯ ನಾಯಕರು ರಸ್ತೆಯಲ್ಲಿ ಹೋಗುವಾಗ ಝೀರೋ ಟ್ರಾಫಿಕ್ ವ್ಯವಸ್ಥೆಯಿರುತ್ತದೆ, ಆದರೆ ಇನ್ಮುಂದೆ ತಾವು ಸಂಚರಿಸುವ ರಸ್ತೆಗಳಲ್ಲಿ ಭದ್ರತೆಗಾಗಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಬಾರದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ಸಭೆ ಸಮಾರಂಭಗಳಲ್ಲಿ ಹಾರಾ, ತುರಾಯಿ ಹಾಕಬಾರದೆಂದು ಸೂಚನೆಯ ಬೆನ್ನಲ್ಲೇ ಸಾರ್ವಜನಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ತಾವು ಮನೆಯಿಂದ ಹೊರಡುವಾಗ ಅಥವಾ ಅಧಿಕೃತ ಕಾರ್ಯಕ್ರಮಕ್ಕೆ ಹೋಗುವ ಸಂದರ್ಭ ಭದ್ರತೆಗಾಗಿ ಝೀರೋ

ಟ್ರಾಫಿಕ್ ವ್ಯವಸ್ಥೆ ನೀಡಬಾರದು ಎಂದು ಸೂಚನೆ ನೀಡಿದ್ದಾರೆ.

ತಾವು ಸಂಚರಿಸುವಾಗ ಸಿಗ್ನಲ್ ಫ್ರೀ ಮಾಡಿಕೊಡಲು ಸೂಚಿಸಿರುವ ಸಿಎಂ, ತಮ್ಮ ಸಂಚಾರ ವೇಳೆ ಆಂಬ್ಯುಲೆನ್ಸ್ ಗೆ ಹೋಗಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದಾರೆ.

Leave a Comment