ಬಂಟ್ವಾಳ :ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ.) ಆ.20-28ರ ವರೆಗೆ “ನವದಿನಗಳ ಭಜನಾ ಸಂಕೀರ್ತನೆ". ಆ.28ರಂದು "ವರಮಹಾಲಕ್ಷ್ಮೀ ಪೂಜಾ ವೃತ” ಆ. 4ರಂದು “ಮೊಸರು ಕುಡಿಕೆ ಉತ್ಸವ”

Coastal Bulletin
ಬಂಟ್ವಾಳ :ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ.) ಆ.20-28ರ ವರೆಗೆ “ನವದಿನಗಳ ಭಜನಾ ಸಂಕೀರ್ತನೆ". ಆ.28ರಂದು "ವರಮಹಾಲಕ್ಷ್ಮೀ ಪೂಜಾ ವೃತ” ಆ. 4ರಂದು “ಮೊಸರು ಕುಡಿಕೆ ಉತ್ಸವ”

ಬಂಟ್ವಾಳ :ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ.) ನಿತ್ಯಾನಂದನಗರ ಬೈಪಾಸ್ ರಸ್ತೆ, ಬಂಟ್ವಾಳ ಇಲ್ಲಿ 14ನೇ ವಾರ್ಷಿಕ ಶ್ರಾವಣ ಮಾಸದ “ನವದಿನಗಳ ಭಜನಾ ಸಂಕೀರ್ತನೆ”ಯು ಆ.20 ರಿಂದ 28ರ ವರೆಗೆ ನಡೆಯಲಿದೆ.21ನೇ ವರ್ಷದ "ವರಮಹಾಲಕ್ಷ್ಮೀ ಪೂಜಾ ವೃತ” ಆ.28ನೇ ಶುಕ್ರವಾರ ನಡೆಯಲಿದ್ದು,ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 36ನೇ ವರ್ಷದ “ಮೊಸರು ಕುಡಿಕೆ ಉತ್ಸವ”ಆ. 04ನೇ ಶುಕ್ರವಾರದಂದು ಜರುಗಲಿದೆ ಎಂದು ಮಂದಿರದ ಅಧ್ಯಕ್ಷರಾದ ದಿನೇಶ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


.ಕಾರ್ಯಕ್ರಮದ ವಿವರ :

ನವದಿನಗಳ ಭಜನಾ ಸಂಕೀರ್ತನೆ”ಪ್ರಯುಕ್ತ  ಪ್ರತಿ ದಿನ ಸಂಜೆ ಗಂಟೆ 7-00ಕ್ಕೆ ಭಜನಾ ಕಾರ್ಯಕ್ರಮವು ಪ್ರಾರಂಭವಾಗಲಿದೆ.

ರಾತ್ರಿ ಗಂಟೆ 8-30ಕ್ಕೆ ಮಹಾಪೂಜೆ ನಂತರ ಎಲ್ಲಾ ಭಕ್ತಾಧಿಗಳಿಗೆ "ತೀರ್ಥ ಪ್ರಸಾದ" ಹಾಗೂ "ಅನ್ನ ಸಂತರ್ಪಣೆ" ನಡೆಯಲಿದೆ.ಆ.28ರಂದು“ಭಜನಾ ಮಂಗಲೋತ್ಸವ”ನಡೆಯಲಿದೆ.


ಆ.28 ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ವೃತ:

21ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ವೃತವು ಆ.28 ಶುಕ್ರವಾರ ಅಪರಾಹ್ನ ಗಂಟೆ 3-00ರಿಂದ ಪೂಜೆ ಪ್ರಾರಂಭಗೊಂಡು ಸಂಜೆ ಗಂಟೆ 5-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ಜರುಗಲಿದೆ.

ವರಮಹಾಲಕ್ಷ್ಮೀ ಪೂಜೆಗೆ ಕುಳಿತುಕೊಳ್ಳುವ ಮಾತೆಯರು ಸಂಜೆ ಗಂಟೆ 3-00ಕ್ಕೆ  ಪೂಜೆ ಆರಂಭವಾಗುವ ಮೊದಲೇ ಹಾಜರಿರಬೇಕು

ಮತ್ತು ಹರಿವಾಣವನ್ನು ತರಬೇಕು.ಪೂಜೆ ಮಾಡಲಿಚ್ಛಿಸುವವರು ರೂ.100/-ನ್ನು ಪಾವತಿಸಿ ರಶೀದಿ ಮಾಡಿಸಿಕೊಳ್ಳಬೇಕು.


ಸೆ4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ:

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 36ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ. 4ರಂದು ಶುಕ್ರವಾರ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ವಠಾರದಲ್ಲಿ ಜರುಗಲಿದೆ, ಬೆಳಿಗ್ಗೆ ಗಂಟೆ 9-00ರಿಂದ ವಿವಿಧ ಆಟೋಟ ಸ್ಪರ್ಧೆಗಳು ಸಂಜೆ ಗಂಟೆ 5-00ಕ್ಕೆ ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ, ನಂತರ ಬಹುಮಾನ ವಿತರಣೆ,ರಾತ್ರಿ ಗಂಟೆ 8-00ರಿಂದ 12-00ರ ತನಕ ಭಜನಾ ಕಾರ್ಯಕ್ರಮ ನಡೆಯಲಿರುವುದು.

ಆ.30 ಆದಿತ್ಯವಾರದಂದು ಬೆಳಿಗ್ಗೆ 9-00ರಿಂದ ಶಾಲಾ ಮಕ್ಕಳಿಗೆ “ಚಿತ್ರಕಲಾ ಸ್ಪರ್ಧೆ” ಭಜನಾ ಮಂದಿರದಲ್ಲಿ ಜರಗಲಿರುವುದು ಎಂದು  ತಿಳಿಸಿದ್ದಾರೆ.

Leave a Comment