ಕಾಪು: ಕಾಪು ಸಮುದ್ರದಲ್ಲಿ ಶುಕ್ರವಾರ ಮೀನುಗಾರರ ಹಾಕಿದ ಬಲೆಗೆ ರಾಶಿ ರಾಶಿ ಭೂತಾಯಿ ಮೀನುಗಳು ಬಿದ್ದಿವೆ.
ಉಡುಪಿ ಕೈಪುಂಜಾಲನ ಓಂ ಸಾಗರ್ ಜೋಡು ದೋಣಿಯ ಮೀನುಗಾರರು ಹಾಕಿದ ಬಲೆಗೆ 30 ಟನ್‌ಗೂ ಅಧಿಕ ಭೂತಾಯಿ ಮೀನು ಬಿದ್ದಿದ್ದು ಮಾತ್ರವಲ್ಲದೆ, 30 ಲಕ್ಷಕ್ಕೂ ಹೆಚ್ಚಿನ ದರದಲ್ಲಿ ಮೀನು ಮಾರಾಟವಾಗಿದೆ.
ಅಸಾನಿ ಚಂಡ ಮಾರುತದಿಂದ
ಕಡಲು ಪ್ರಕ್ಷ್ಯುಬ್ದ ಗೊಂಡಿರುವ ಕಾರಣ ಗಂಗೊಳ್ಳಿಯಿಂದ ಮಂಗಳೂರಿನ ಕರಾವಳಿಯವರೆಗೆ ಹೇರಳವಾಗಿ ಭೂತಾಯಿ ಮೀನು ಕಾಣಿಸಿಕೊಳ್ಳುತ್ತಿವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಮೀನುಗಾರರ ಬಲೆಗೆ ರಾಶಿ ರಾಶಿ ಭೂತಾಯಿ ಮೀನು ಬೀಳುತ್ತಿರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ














