ರಾಜ್ಯ ಸರಕಾರದ ಉಚಿತ ಯೋಜನೆಗಳಿಂದ ಗ್ರಾಮದ ಅಭಿವೃದ್ಧಿಗಳಿಗೆ ಸರಕಾರ ಹಣ ನೀಡುತ್ತಿಲ್ಲ- ಜೆಡಿಸ್ ಶಾಸಕ ಮಂಜು ಅಳಲು.

Coastal Bulletin
ರಾಜ್ಯ ಸರಕಾರದ ಉಚಿತ ಯೋಜನೆಗಳಿಂದ ಗ್ರಾಮದ ಅಭಿವೃದ್ಧಿಗಳಿಗೆ ಸರಕಾರ ಹಣ ನೀಡುತ್ತಿಲ್ಲ- ಜೆಡಿಸ್ ಶಾಸಕ ಮಂಜು ಅಳಲು.

ಮಂಡ್ಯ:ಸರ್ಕಾರದ ಬಳಿ ಸರ್ಕಾರಿ‌ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ, ಇದ್ದ ಎಲ್ಲಾ ಯೋಜನೆಗಳ ಅನುದಾನವನ್ನು ತೆಗೆದು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ ಎಂದು ಮಂಡ್ಯ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಎಚ್.ಟಿ ಮಂಜು ಅಳಲುತೋಡಿಕೊಂಡಿದ್ದಾರೆ.

ಮಂಡ್ಯ ತಾಲೂಕಿನ ಸಿಂಧಘಟ್ಟ ಗ್ರಾಮದಲ್ಲಿ ಜಲಜೀವನ್ ಮಿಷನ್‌ ಕಾಮಗಾರಿ ಉದ್ಘಾಟನೆ ವೇಳೆ ತಮ್ಮ ನೋವನ್ನು ತೋಟಿಕೊಂಡಿದ್ದಾರೆ. ತಮ್ಮೂರಿನ ರಸ್ತೆ ದುರಸ್ತಿ ಸಮಸ್ಯೆ‌ ಹೇಳಿ ಕೊಂಡ ಮಹಿಳೆ ಬಳಿ ಸರ್ಕಾರ ದ ಸಮಸ್ಯೆ ಹೇಳಿಕೊಂಡಿದ್ದಾರೆ. ಸರ್ಕಾರದ ಬಳಿ ಸರ್ಕಾರಿ‌ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ, ಎಲ್ಲ ಯೋಜನೆಯ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ, ಅಭಿವೃದ್ಧಿ ಕೆಲಸಗಳಿಗೆ ಹಣ ನೀಡುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ.

ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಬಿಡಿಗಾಸು ನೀಡ್ತಿದೆ, ಇದರಲ್ಲಿ ಯಾವುದೇ

ಗ್ರಾಮದ ಅಭಿವೃದ್ಧಿ ಕೆಲಸ ಮಾಡಲು ಆಗಲ್ಲ, ಸರ್ಕಾರದ ಬಳಿ ನೌಕರರಿಗೆ ವೇತನಕೊಡಲು ಹಣವಿಲ್ಲ, ಸರ್ಕಾರ ಯಾವುದೇ ಶಾಸಕರ ಸಮಸ್ಯೆಗಳಿಗೆ ಸ್ಪಂದಿಸ್ತಿಲ್ಲ,ನಾನು ಎಂಎಲ್‍ಎ ಆಗಿ 9 ತಿಂಗಳು ಆಗ್ತಿದೆ. ನನಗೆ ಇಲ್ಲಿಯವರೆಗೆ ಕೊಟ್ಟಿರೋದು ಕೇವಲ 50 ಲಕ್ಷ ರೂ. ಅನುದಾನ. ನನ್ನ ಕ್ಷೇತ್ರದಲ್ಲಿ 382 ಹಳ್ಳಿಗಳಿದೆ. ದೊಡ್ಡ ಹಳ್ಳಿಗೆ 50 ಸಾವಿರ ಕೊಡ್ತೀನಿ ಅಂದ್ರೆ, ಸಣ್ಣ ಹಳ್ಳಿ 25 ಸಾವಿರನಾದರೂ ಕೊಡಬೇಕು. ಆದರೆ ಪ್ರತಿಹಳ್ಳಿಗೆ 25 ಸಾವಿರ ಅನುದಾನ ಕೊಡೋಕು ದುಡ್ಡು ಸಾಲಲ್ಲ ಎಂದಿದ್ದಾರೆ.

Leave a Comment