ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇಂದಿನಿಂದ ಶುರುವಾಗಲಿದೆ. ಐಪಿಎಲ್ 2022 ಟೂರ್ನಿ ಸಲುವಾಗಿ ಎಲ್ಲಾ 10 ತಂಡಗಳು 550 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಖರ್ಚು ಮಾಡಿ ಬರೋಬ್ಬರಿ 204 ಆಟಗಾರರನ್ನು ಖರೀದಿ ಮಾಡಿದೆ. ಈ ನಡುವೆ ಕೊರೊನಾ ವೈರಸ್ ಭೀತಿ ನಡುವೆ ಬಿಸಿಸಿಐ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮಾರ್ಚ್ 26ರಿಂದ ಆಯೋಜಿಸಲು ನಿರ್ಧರಿಸಿದೆ.
ಹದಿನೈದನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡು ಹೊಸ ತಂಡಗಳ ಆಗಮನವಾಗಿದೆ. ಲಖನೌ ಸೂಪರ್ ಜಯಂಟ್ಸ್ ಮತ್ತು ಗುಜರಾತ್ ಜಯಂಟ್ಸ್ ಕಣಕ್ಕಿಳಿದಿರುವ ಹೊಸ ತಂಡಗಳು. ಇದೇ ಕಾರಣಕ್ಕೆ ಬಿಸಿಸಿಐ ಎಲ್ಲ ತಂಡಗಳಿಗೆ ಬಹುತೇಕ ಹೊಸ ತಂಡ ರಚಿಸಿಕೊಳ್ಳುವ ಅವಕಾಶ ಮಾಡಿಕೊಟ್ಟು, ಫೆ.12-13ರಂದು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮೆಗಾ ಆಕ್ಷನ್ ನಡೆಸಿತ್ತು.
ಎಲ್ಲ ತಂಡಗಳು 550 ಕೋಟಿ ರೂ.ಗಳಿಗೂ
ಹೆಚ್ಚಿನ ಹಣ ಖರ್ಚು ಮಾಡಿ ಒಟ್ಟಾರೆ 204 ಆಟಗಾರರನ್ನು ಖರೀದಿ ಮಾಡಿವೆ. ಇಶಾನ್ ಕಿಶನ್ (15.25 ಕೋಟಿ ರೂ.) ಈ ಬಾರಿಯ ಹರಾಜಿನಲ್ಲಿ ಅತಿ ದುಬಾರಿ ಬೆಲೆಗೆ ಮಾರಾಟವಾದ ಆಟಗಾರ ಎನಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಕಿಶನ್ ಅವರನ್ನು ಖರೀದಿಸಿದೆ. ಒಟ್ಟಾರೆ 11 ಆಟಗಾರರಿಗೆ ಈ ಬಾರಿ 10 ಕೋಟಿ ರೂ.ಗಳಿಗೂ ಅಧಿಕ ಬೆಲೆ ಸಿಕ್ಕಿದೆ.














