ಬಂಟ್ವಾಳ : ಪುನರ್‌ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸರಪಾಡಿ ಇದರ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ಶ್ರೀ ಗಣಪತಿ ದೇವರ ಪ್ರತಿಷ್ಠೆ, ಗಂಟೆ ೯.೫೬ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವರ ಪ್ರತಿಷ್ಠೆ ನಡೆಯಿತು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ತಂತ್ರಿ ಸರಪಾಡಿ ಅರಮನೆ ವೇ.ಮೂ. ಶಿವಪ್ರಸಾದ ಐತಾಳರ ನೇತೃತ್ವದಲ್ಲಿ ಅಷ್ಠಬಂಧ ಸ್ಥಾಪನೆ, ಕಲಶ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹವನ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಿತು.
ದೇವಸ್ಥಾನದ ಪ್ರಧಾನ ಕಲಶ ಪ್ರತಿಷ್ಠಾಪನೆಯ ವೇಳೆ ಗರುಡ ಪ್ರದಕ್ಷಿಣೆ ಹಾಕಿರುವುದು ನೆರೆದ ಜನರಲ್ಲಿ ಭಕ್ತಿ ಭಾವವನ್ನು ಇಮ್ಮಡಿಗೊಳಿಸಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಜಿ.ಪಂ. ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಜೀವ
ಪೂಜಾರಿ ಬಿ.ಸಿ.ರೋಡು, ಕಾರ್ಯದರ್ಶಿ ದಯಾನಂದ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಪ್ರಧಾನ ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ, ಪ್ರಮುಖರಾದ ದಯಾನಂದ ಐತಾಳ್, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೆಲ್‌ಗುತ್ತು, ಪುರುಷೋತ್ತಮ ಮೊಗರುಮಜಲು, ಮೋನಪ್ಪ ಪೂಜಾರಿ ಬಸೊಂಬು, ಚಂದ್ರಶೇಖರ ಶೆಟ್ಟಿ ಹೊಳ್ಳರಗುತ್ತು, ಧನಂಜಯ ಶೆಟ್ಟಿ, ಶಾಂತಪ್ಪ ಪೂಜಾರಿ ಹಟದಡ್ಕ, ಪುರುಷೋತ್ತಮ ಕಾಯರ್‌ಪಲ್ಕೆ, ಸಂತೋಷ್ ಕುಲಾಲ್ ಸರಪಾಡಿ, ರಮೇಶ್ ಸಾಲ್ಯಾನ್, ದೇವಪ್ಪ ಕುಲಾಲ್, ಎಲ್.ಕೆ.ಧರಣ್, ಹರಿಣಾಕ್ಷಿ ಪದವಿನಂಗಡಿ, ಪ್ರಮೀಳಾ ಪೊಳಲಿ, ಮೋಹಿನಿ ಬಾಚಕೆರೆ, ಶಕುಂತಲಾ ಟೀಚರ್, ಶಶಿಧರ ಬಾಚಕೆರೆ, ಸುಂದರ ಬಾಚಕೆರೆ, ನಿರಂಜನ್ ಬಾಚಕೆರೆ, ಗಿರಿನಾಥ ಶರ್ಮ,ಜೀರ್ಣೋದ್ಧಾರ ಸಮಿತಿ, ಬ್ರಹ್ಮ ಕಲಶೋತ್ಸವ ಸಮಿತಿ ಪದಾದಿಕಾರಿಗಳು,ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.














