ಬಂಟ್ವಾಳ: ಜೇಸಿಐ ಬಂಟ್ವಾಳದ ವತಿಯಿಂದ ಚೇರ್ಮ್ಯಾನ್ ಷಿಪ್ ಮತ್ತು ಪಾರ್ಲಿಮೆಂಟರಿ ಪ್ರೊಸುಜರ್ (CAPP)ಬಗ್ಗೆ ತರಬೇತಿ ಕಾರ್ಯಗಾರವು ಮಾ 25ರ ಶುಕ್ರವಾರ ಬಿ ಸಿ ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ,ಜೇಸಿಐ ನ ರಾಷ್ಟ್ರೀಯ ತರಬೇತುದಾರ ಜೇಸಿಐ ಸೆನ್ ಡಾ ರಾಘವೇಂದ್ರ ಹೊಳ್ಳ ಅವರು ಭಾಗವಹಿಸಿ ಸಮಗ್ರ ಮಾಹಿತಿಯನ್ನು ನೀಡಿ ತರಬೇತಿಯನ್ನು ನಡೆಸಿಕೊಟ್ಟರು.
ಜೇಸಿಐ ಬಂಟ್ವಾಳದ ಅಧ್ಯಕ್ಷ ಜೇಸಿ ರೋಶನ್ ರೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ನಿಕಟಪೂರ್ವ ಅಧ್ಯಕ್ಷ ಜೇಸಿ
ಉಮೇಶ್ ಮೂಲ್ಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಕಾರ್ಯದರ್ಶಿ ಜೇಸಿ ರವೀನಾ ಬಂಗೇರ ಅವರು ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಜೆಸಿಯ ತಿಂಗಳ ಸಾಮಾನ್ಯ ಸಭೆಯು ನಡೆಯಿತು. ವಲಯಾಧಿಕರಿಗಳು, ಪುರ್ವಾಧ್ಯಕ್ಷರುಗಳು, ಜೇಸಿ ಸದಸ್ಯರು,ಹಾಗೂ ಲೇಡಿ ಜೇಸಿ ಗಳು ಉಪಸ್ಥಿತರಿದ್ದರು.














