ಬಂಟ್ವಾಳ :ಸೇವಾ ಭಾರತಿ ಬಂಟ್ವಾಳ ತಾಲೂಕು ಮತ್ತುಹಿಂದೂ ಜಾಗರಣ ವೇದಿಕೆ ತುಂಬೆವಲಯ, ಇದರ ವತಿಯಿಂದ ದಿ. ವೆಂಕಟರಮಣ ಹೊಳ್ಳ ಇವರ ಸಂಸ್ಮರಣಾರ್ಥ,35ನೇ ರಕ್ತದಾನ ಶಿಬಿರ ಶ್ರೀ ಶಾರದಾ ಸಭಾ ಭವನ ತುಂಬೆ ಇಲ್ಲಿ ನಡೆಯಿತು.
ವೈದ್ಯಕೀಯ ರೂಪದಲ್ಲಿ ಜನರ ಸೇವೆ ಮಾಡಿದ ಇಂದಿನ ಪ್ರಮುಖ ಅತಿಥಿಯಾದ ಖ್ಯಾತ ವೈದ್ಯರಾದ ಡಾ. ರಘುರಾಮ ಶೆಟ್ಟಿ ಗುಳ್ಳಾಡಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದಾಕಾಲ ರಕ್ತದಾನ ಮಾಡುತ್ತಾ ರಕ್ತದಾನದ ಬೇಡಿಕೆಗೆ ಸ್ಪಂದಿಸುತ್ತಿರುವ "ಯುವಶಕ್ತಿ ರಕ್ತನಿಧಿ" ತಂಡವನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಆರ್ ಎಸ್ ಎಸ್ ನ ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ ಕುಮಾರ್ ಕೊಡಮಣ್ಣು,
ಉದ್ಯಮಿಗಳಾದ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಕಿಶೋರ್ ಕುಮಾರ್, ಹಿಂ.ಜಾ.ವೇ ಜಿಲ್ಲಾಧ್ಯಕ್ಷರಾದ ಜಗದೀಶ್ ಹೊಳ್ಳರಬೈಲ್, ಹಿಂ.ಜಾ.ವೇ ತಾಲೂಕು ಅಧ್ಯಕ್ಷ ತಿರುಲೇಶ್ ಬಡಗಬೆಳ್ಳೂರು ಮತ್ತು ಹಿಂ.ಜಾ.ವೇ ತುಂಬೆ ವಲಯ ಅಧ್ಯಕ್ಷ
ವಿಜಯ್ ಕುಮಾರ್ ಕಜೆಕಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊಡ್ಮಣ್ ಕಾಂತಪ್ಪ ಶೆಟ್ಟಿ, ತೇವು ತಾರಾನಾಥ ಕೊಟ್ಟಾರಿ, ಗಣೇಶ್ ಸುವರ್ಣ ತುಂಬೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಮಾಧವ ನಾಣ್ಯ, ಪ್ರವೀಣ್ ಬಿ ತುಂಬೆ, ಸುರೇಶ್ ನಾಯ್ಕ, ದಾಮೋದರ ನೆತ್ತರಕೆರೆ, ಮನೋಹರ ಕುಂಜತ್ತೂರು, ಪ್ರಶಾಂತ್ ಕೆಂಪು ಗುಡ್ಡೆ, ಸುಧಾಕರ ರಾಮಲ್ ಕಟ್ಟೆ, ಸಿದ್ದಪ್ಪ ಅಂಗಡಿ, ರಾಘವ ಬಂಗೇರ ಪೇರ್ಲಬೈಲ್, ಪುರುಷೋತ್ತಮ ಗಟ್ಟಿ, ಯೋಗೀಶ್ ಕೋಟ್ಯಾನ್, ಯಶವಂತ ಬೊಳ್ಳಾರಿ, ಕಿಶೋರ್ ರಾಮಲ್ ಕಟ್ಟೆ, ಅರುಣ್ ಗಾಣದಲಚ್ಚಿಲ್ ಹಾಗೂ ಕೆಎಂಸಿ ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್??














