Coastal Bulletin

ಉಪ್ಪಿನಂಗಡಿ : ತಿಂಡಿಯೆಂದು ಇಲಿ ಪಾಷಾಣವನ್ನು ತಿಂದು ಎರಡೂವರೆ ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಬಜಂತೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿಯ ಪುತ್ರಿ ಶ್ರೇಯಾ ಮೃತಪಟ್ಟ ಮಗು.

ಮಗು ಮನೆಯೊಳಗೆ ಆಟವಾಡುತ್ತಿದ್ದಾಗ ಕೈಗೆ ಸಿಕ್ಕಿದ

ಇಲಿಗಳನ್ನು ಕೊಲ್ಲಲು ಬಳಸುವ ವಿಷದ ವಸ್ತುವನ್ನು ತಿಂದಿದೆ ಎನ್ನಲಾಗುತ್ತಿದ್ದು ತೀವ್ರ ಅಸ್ವಸ್ಥಗೊಂಡ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಒಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮಗು ಅಸುನೀಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment