ಮಹಾರಾಷ್ಟ್ರ: ಪುಣೆಯ ಡೈವ್ ಘಾಟ್ ಪ್ರದೇಶದಲ್ಲಿ ಕಾರಿನ ಬಾನೆಟ್ ಮೇಲೆ ವಧುವಿನ ಪೋಟೋ ಶೂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಖಕ್ಕೆ ಮಾಸ್ಕ್ ಧರಿಸದೆ ಕಾರಿನ ಬಾನೆಟ್‌ನಲ್ಲಿ ಕುಳಿತು ವಿವಾಹದ ಫೋಟೋಶೂಟ್‌ಗಾಗಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಧುವಿನ ವಿರುದ್ಧ ಪ್ರಕರಣ ದಾಖಲಾಗಿದೆ.
ಫೋಟೋಶೂಟ್‌ನಲ್ಲಿ ಭಾಗವಹಿಸಿದ ಕಾರಿನ ಚಾಲಕ,
ಕ್ಯಾಮರಾಮನ್ ಮತ್ತು ಇತರರ ವಿರುದ್ಧವೂ ಪ್ರಕರಣಗಳು ದಾಖಲಿಸಲಾಗಿದ್ದು ಚಿತ್ರೀಕರಣಕ್ಕೆ ಬಳಸಿದ ಕ್ಯಾಮೆರಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.















