Coastal Bulletin

ಬಂಟ್ವಾಳ :ಶ್ರೀ ರಕ್ತೇಶ್ವರಿ ಯುವಕ ಸಂಘದ ವತಿಯಿಂದ 21ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ ಮೇ 15ರಂದು ಆದಿತ್ಯವಾರ ಶ್ರೀ ರಕ್ತೇಶ್ವರಿ ಸಭಾ ಭವನ ನೇರಂಬೋಳು ನಲ್ಲಿ ನಡೆಯಿತು.

ಸುಮಾರು 70 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.ಓರ್ವ ವಿದ್ಯಾರ್ಥಿಯ ಒಂದರಿಂದ ಹತ್ತನೇ ತರಗತಿವರೆಗಿನ ಶಾಲೆಯ ಸಂಪೂರ್ಣ ವೆಚ್ಚಗಳನ್ನು ನೀಡಲಾಯಿತು.

ಕಾರ್ಯಕ್ರಮಕ್ಕೆ ಜೆ ಸಿ ಐ ಬಂಟ್ವಾಳದ ಅಧ್ಯಕ್ಷರಾದ ರೋಷನ್ ರೈ ಅತಿಥಿಯಾಗಿ ಆಗಮಿಸಿದ್ದರು.ಉದ್ಯಮಿ ಅಮುಲ್

ಪವರ್ ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಟೈಲರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ದಯಾನಂದ ನೇರಂಬೊಳು, ನಿಕಟಪೂರ್ವ ಅಧ್ಯಕ್ಷ ಮನೋಹರ ನೇರಂಬೋಳು, ಗಣೇಶ ಆಚಾರ್ಯ ವೇದಿಕೆಯಲ್ಲಿದ್ದರು.

ಕಾರ್ಯದರ್ಶಿ ರವೀಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಸದಸ್ಯ ಸಚಿನ್ ಧನ್ಯವಾದವಿತ್ತರು.



Leave a Comment