Coastal Bulletin

ಮೆಲ್ಬೊರ್ನ್‌: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಪೋಟಕ ಆಲ್ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌, ಕಾರು ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್ ದಿಗ್ಗಜರಾದ ಶೇನ್ ವಾರ್ನ್‌, ರಾಡ್ ಮಾರ್ಷ್ ನಿಧನರಾಗಿರುವ ಕಹಿ ಸುದ್ದಿ ಮಾಸುವ ಮುನ್ನವೇ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಕೊನೆಯುಸಿರೆಳೆದಿದ್ದಾರೆ. ಆಂಡ್ರ್ಯೂ ಸೈಮಂಡ್ಸ್‌ಗೆ 46 ವರ್ಷ ವಯಸ್ಸಾಗಿತ್ತು.

ಅಪಘಾತ ನಡೆದ ತಕ್ಷಣವೇ ಪೊಲೀಸರು ತಕ್ಷಣವೇ ತುರ್ತು ಸೇವೆಯನ್ನು ಒದಗಿಸಲು ಮುಂದಾಗಿದ್ದರು.

ಆದರೆ ಕಾರು ಪಲ್ಟಿಹೊಡೆದು, ರಸ್ತೆಯ ಮಧ್ಯದಲ್ಲೇ ಬಿದ್ದಿದ್ದರಿಂದ ತೀವ್ರ ಇಂಜರಿಯಾಗಿದ್ದರಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರು. 

Leave a Comment