breaking news

Coastal Bulletin

ಹೊಸದಿಲ್ಲಿ: ಇನ್ನು ಫೋನ್‌ ಪೇ ಬಳಸಿ ವಿದೇಶಗಳಲ್ಲೂ ಹಣ ಪಾವತಿ ಮಾಡಬಹುದು. ಇದರ ಮೂಲಕ ಒಬ್ಬ ವ್ಯಕ್ತಿಯ ಬ್ಯಾಂಕ್‌ ಖಾತೆಯಿಂದ ವಿದೇಶಿ ಕರೆನ್ಸಿಯಲ್ಲಿ ಹಣ ಕಡಿತವಾಗುತ್ತದೆ. ಸದ್ಯ ಈ ಪಾವತಿ ವ್ಯವಸ್ಥೆ ಯುಎಇ, ಸಿಂಗಾಪುರ, ಮಾರಿಷಸ್‌, ನೇಪಾಲ, ಭೂತಾನ್‌ಗಳಲ್ಲಿ ಲಭ್ಯವಿದೆ.

ಕಾಲಕ್ರಮೇಣ ಇನ್ನಷ್ಟು ದೇಶಗಳಿಗೆ ಇದು ವಿಸ್ತರಿಸಿಕೊಳ್ಳಲಿದೆ. ಈ ಹೊಸ ವ್ಯವಸ್ಥೆ ಯುಪಿಐ ವ್ಯವಸ್ಥೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಆಯಪ್ ಸ್ಟೋರ್‌ಗಳಲ್ಲಿ ಇನ್ನು ಮುಂದೆ ಕೇವಲ ಅನುಮತಿಯಿರುವ ಮತ್ತು ನಿಯಂತ್ರಿತ ಡಿಜಿಟಲ್‌ ಸಾಲ ಆಯಪ್‌ಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೂಚಿಸಿದೆ.

ಜತೆಗೆ ಕಾನೂನುಬದ್ಧ ಸಂಸ್ಥೆಗಳು ಬಳಸುತ್ತಿರುವ ಡಿಜಿಟಲ್‌ ಸಾಲ ಆಯಪ್‌ಗ್ಳ ಪಟ್ಟಿಯನ್ನು ಕೂಡ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆರ್‌ಬಿಐ ರವಾನಿಸಿದೆ.

Leave a Comment