ನವದೆಹಲಿ : ಲೋಕಸಭೆ, ವಿಧಾನಸಭೆಗಳಲ್ಲಿ ಶೇ.33 ಮಹಿಳಾ ಮೀಸಲಾತಿ ನೀಡಲು ಉದ್ದೇಶಿಸಿದ್ದ 'ಸಂವಿಧಾನ (131ನೇ ತಿದ್ದುಪಡಿ) ಮಸೂದೆ -2026' ಲೋಕಸಭೆಯಲ್ಲಿ ಶುಕ್ರವಾರ ಸೋಲು ಕಂಡಿದೆ. ಈ ಮೂಲಕ 2029ರ ಲೋಕಸಭೆ ಚುನಾವಣೆಯಿಂದ ಶೇ.33 ಮಹಿಳಾ ಮೀಸಲು ಜಾರಿಗೊಳಿಸುವ ಮೋದಿ ಸರ್ಕಾರದ ಕನಸು ಭಗ್ನವಾಗಿದೆ. ಸಾಂವಿಧಾನಿಕ ತಿದ್ದುಪಡಿ ಆದ ಕಾರಣ ಅಂಗೀಕಾರಕ್ಕೆ ಅಗತ್ಯವಾಗಿದ್ದ 3ನೇ 2ರಷ್ಟು ಬಹುಮತ ಬಾರದೇ ಮಸೂದೆಗೆ 54 ಮತ ಅಂತರದಿಂದ ಸೋಲಾಗಿದೆ.
ಮಸೂದೆ ಪರ ಕೇವಲ 298 ಮತಗಳು ಮಾತ್ರ ಬಿದ್ದವು. ಮಸೂದೆಯ ವಿರುದ್ಧವಾಗಿ 230 ಮತಗಳು ಬಂದಿವೆ. ಈ ಮೂಲಕ ಮತ ಚಲಾಯಿಸಿದ 528 ಸದಸ್ಯರಲ್ಲಿ, ಬಹುಮತಕ್ಕೆ ಮೂರನೇ ಎರಡರಷ್ಟು ಅಂದರೆ 352 ಮತಗಳ ಅಗತ್ಯವಿತ್ತು. ಆದರೆ ನರೇಂದ್ರ ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲಿ ಬಹುಮತವಿರಲಿಲ್ಲ. ಆದರೆ
ಕೇವಲ 298 ಮತಗಳು ಬಂದಿದ್ದರಿಂದ ಮಸೂದೆಗೆ ಸೋಲಾಗಿದೆ.
ಲೋಕಸಭೆಯಲ್ಲಿ ಎರಡು ದಿನಗಳ ಚರ್ಚೆಯ ನಂತರ ಮಸೂದೆಯನ್ನು ಮತಕ್ಕೆ ಹಾಕಿದಾಗ, ಬಹುಮತ ಸಿಗದೇ ಸೋಲಾಗಿದೆ.
ಇದರೊಂದಿಗೆ ಸಂವಿಧಾನ ತಿದ್ದುಪಡಿ ಮಸೂದೆ ಮೂಲಕ 2029ರಲ್ಲಿ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸುವ ಮತ್ತು ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಯಿತು.













