Coastal Bulletin

ಏಪ್ರಿಲ್ 1 ರಿಂದ ಕಾರು ಮತ್ತು ದ್ವಿಚಕ್ರ ವಾಹನಗಳ ವಿಮಾ ವೆಚ್ಚದಲ್ಲಿ ಏರಿಕೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ವಿವಿಧ ವರ್ಗಗಳ ವಾಹನಗಳಿಗೆ ಥರ್ಡ್‌ ಪಾರ್ಟಿ ಮೋಟಾರು ವಿಮಾ ಪ್ರೀಮಿಯಂ ಅನ್ನು ಹೆಚ್ಚಿಸಲು ಪ್ರಸ್ತಾಪ ಮಾಡಿದೆ. ಹೀಗಾಗಿ ಏಪ್ರಿಲ್‌ 1 ರಿಂದ ಕಾರು ಮತ್ತು ದ್ವಿಚಕ್ರ ವಾಹನಗಳ ವಿಮಾ ಪ್ರೀಮಿಯಂ ಏರಿಕೆಯಾಗುವ ಸಾಧ್ಯತೆಯಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿಳಂಬದ ನಂತರ, ಪರಿಷ್ಕೃತ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈ

ಹಿಂದೆ, ವಿಮಾ ನಿಯಂತ್ರಕ (IRDAI)ನಿಂದ ಟಿಪಿ ದರಗಳನ್ನು ಸೂಚಿಸಲಾಗುತ್ತಿತ್ತು. ರಸ್ತೆ ಸಾರಿಗೆ ಸಚಿವಾಲಯವು ವಿಮಾ ನಿಯಂತ್ರಕರೊಂದಿಗೆ ಸಮಾಲೋಚಿಸಿ ಟಿಪಿ ದರಗಳನ್ನು ತಿಳಿಸಿರುವುದು ಇದೇ ಮೊದಲ ಬಾರಿಯಾಗಿದೆ.

Leave a Comment