ನವದೆಹಲಿ : ಇಂದು ರೈಲ್ವೆ ಪೊಲೀಸ್ ಎಡಿಪಿಜಿ ಆಗಿದ್ದ ಐಪಿಎಸ್ ಅಧಿಕಾರಿ ಬಿ.ಭಾಸ್ಕರ್ ರಾವ್ ಆಮ್ ಆದ್ಮಿಪಕ್ಷ ಸೇರಲಿದ್ದಾರೆ.
ರೈಲ್ವೆ ಪೊಲೀಸ್ ಎಡಿಪಿಜಿ ಆಗಿ ಕೆಲಸ ಮಾಡುತ್ತಿರುವಾಗಲೇ ಇವರು ರಾಜೀನಾಮೆ ಸಲ್ಲಿಸಿದ್ದರು. ಇದೀಗ ಸರ್ಕಾರ ಅವರ ರಾಜೀನಾಮೆಯನ್ನು ಎಪ್ರಿಲ್ 1 ಅಂಗೀಕರಿಸಿ, ಹುದ್ದೆಯಿಂದ ಬಿಡುಗಡೆಗೊಳ್ಳಲು ಅನುಮತಿ ನೀಡಿದೆ.
ನವದೆಹಲಿಯ ದೀನ್ ದಯಾಳ್ ಉಪಾದ್ಯಾಯ ಮಾರ್ಗದಲ್ಲಿರುವ
ಆಮ್ ಆದ್ಮಿ ಪಕ್ಷವನ್ನು ಸೋಮವಾರ ಮಧ್ಯಾಹ್ನ ಸೇರಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಮನೀಷ್ ಸಿಸೋಡಿಯಾ ಇನ್ನಿತರರು ಭಾಗಿಯಾಗಲಿದ್ದಾರೆ. ಇದಲ್ಲದೆ, 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಇವರು ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.














