Coastal Bulletin

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶನಿವಾರ ಚಾಂದ್ರಮಾನ ಯುಗಾದಿ ಹಬ್ಬವನ್ನು ಧಾರ್ಮಿಕ ದಿನ ಎಂದು ಆಚರಿಸಲಾಯಿತು.

 ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆದ ಯುಗಾದಿ ಹಬ್ಬದ ವಿಶೇಷ ಆಚರಣೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸರ್ವಾಲಂಕಾರ ಪೂಜೆ ನಡೆಯಿತು. ದೇವಳದ ಪ್ರ. ಅರ್ಚಕರಾದ ಮಾಧವ ಭಟ್, ಕೆ. ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ವಿಶೇಷವಾಗಿ ಪ್ರಾರ್ಥಿಸಿ ಯುಗಾದಿಯ ಪ್ರಯುಕ್ತ ದೇವಳಕ್ಕೆ ಬರುವ ಭಕ್ತರಿಗೆ ಬೇವು ,ಬೆಲ್ಲ, ಪಂಚಕಜ್ಜಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಅನುವಂಶಿಕ ಮೊಕ್ತೇಸರರಾದ ಯು, ತಾರನಾಥ ಆಳ್ವ ಸೂರ್ಯ ನಾರಾಯಣ ರಾವ್, ದೇವಳದ ಕಾರ್ಯಾನಿರ್ವಹಣ ಅಧಿಕಾರಿ ಪಿ.ಜಯಮ್ಮ,

ನಾಗೇಶ್ ರಾವ್, ಸಿಬ್ಬಂದಿವರ್ಗ ಹಾಗೂ ಪ್ರಮುಖರಾದ ವೆಂಕಟೇಶ್ ನಾವಡ ಪೊಳಲಿ, ಚಂದ್ರಾಹಾಸ ಶೆಟ್ಟಿ ನಾರಳ, ಪುರುಷೋತ್ತಮ ಶೆಟ್ಟಿ ವಾಮದಪದವು, ಪವನ್ ಶೆಟ್ಟಿ ಮುತ್ತೂರು, ವಿದ್ಯಾಚರಣ್ ಭಂಡಾರಿ ಮೊಗರುಗುತ್ತು ಮತ್ತಿತರರು ಉಪಸ್ಥಿತರಿದ್ದರು.

 ಸಚಿವ ಈಶ್ವರಪ್ಪ ಭೇಟಿ; 

ರಾಜ್ಯದ ಗ್ರಾಮೀಣಾಭಿರುದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತರಾಗಿ‌ ಶನಿವಾರ ರಾತ್ರಿ ಪೊಳಲಿ‌ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಶಾಸಕ ರಾಜೇಶ್ ನಾಯ್ಕ್ ಅವರು ಸಚಿವರನ್ನು ಸ್ವಾಗತಿಸಿದರಲ್ಲದೆ ಕ್ಷೇತ್ರದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ,ಕೆಯುಡಬ್ಲುಎಸ್ ಸದಸ್ಯೆ ಸುಲೋಚನಾ ಭಟ್ ದೇವಳದ ಆಡಳಿತ ಮೊಕ್ತೇಸರರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.


Leave a Comment