ಜಮ್ಮು ಕಾಶ್ಮೀರ :ಶನಿವಾರ ಮಧ್ಯರಾತ್ರಿಯಲ್ಲಿ ಜಮ್ಮು ವಿಮಾನ ನಿಲ್ಧಾಣದ ಮೇಲೆ ಡ್ರೋಣ್ ದಾಳಿಯ ನಂತರ ಜಮ್ಮುವಿನಲ್ಲಿ ಸತತವಾಗಿ ಡ್ರೋಣ್ ಪತ್ತೆಯಾಗುತ್ತಿವೆ. ಅನಧಿಕೃತವಾಗಿ ಹಾರಾಡುತ್ತಿರುವ ಡ್ರೋಣ್ ಭದ್ರತಾಪಡೆಗಳ ನೆಲೆಗಳ ಸಮೀಪವೇ ಕಾಣಿಸಿಕೊಳ್ಳುತ್ತಿವೆ. ನಿನ್ನ ರಾತ್ರಿ ಜಮ್ಮು ಹೊರವಲಯದಲ್ಲಿ ಮತ್ತೆ ಮೂರು ಡ್ರೋಣ್‌ಗಳು ಪತ್ತೆಯಾಗಿವೆ ಎಂದು ಭದ್ರತಾಪಡೆಗಳು ತಿಳಿಸಿವೆ.
ನಿನ್ನೆ ರಾತ್ರಿ 9:23 ಗಂಟೆಗೆ ಜಮ್ಮುವಿನ ಮಿರಾನ್ ಸಾಹೇಬ್ ಪ್ರದೇಶದಲ್ಲಿ ಡ್ರೋಣ್ ಒಂದು ಪತ್ತೆಯಾಗಿದ್ದರೆ ಇಂದು ಬೆಳಗಿನ ಜಾವ 4:40 ಗಂಟೆಗೆ ಕಾಲುಚುಕ್ ಮತ್ತು ಕುಂಜ್ವಾನಿ ಪ್ರದೇಶದಲ್ಲಿ ಮತ್ತೆರಡು ಡ್ರೋಣ್‌ಗಳು ಪತ್ತೆಯಾಗಿವೆ.
ಜಮ್ಮು ವಿಮಾನ ನಿಲ್ಧಾಣದ ಮೇಲಿನ ದಾಳಿ ನಂತರ ಪ್ರತಿನಿತ್ಯ ಡ್ರೋಣ್‌ಗಳು ಕಾಣಿಸಿಕೊಳ್ಳುತ್ತಿದ್ದು ಭಾರತದ ಭದ್ರತಾ ವ್ಯವಸ್ಥೆಗೆ ತೀವ್ರ ಆತಂಕವನ್ನು ತಂದೊಡ್ಡಿವೆ. ಮಂಗಳವಾರ ಮುಂಜಾನೆ ರತ್ನುಚಕ್, ಕಾಲುಚಕ್ ಮತ್ತು ಕುಂಜ್ವಾನಿ ಪ್ರದೇಶಗಳಲ್ಲಿ ಡ್ರೋಣ್ ಹಾರಾಟ ಕಂಡು
ಬಂದಿದ್ದರೆ ಸೋಮವಾರ ಕೂಡ ಜಮ್ಮುವಿನ ಕಾಲುಚಕ್ ಸೇನಾ ನೆಲೆಯ ಸಮೀಪ ಡ್ರೊಣ್‌ಗಳು ಹಾರಾಟ ನಡೆಸಿದ್ದವು.
ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ ಮತ್ತು ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಲಷ್ಕರೆ ತೋಯ್ಬಾ ಕಮ್ಯಾಂಡರ್ ಎಂದು ಗುರುತಿಸಲಾದ ಶಂಕಿತ ಉಗ್ರ ನದೀಮ್ ಅಬ್ರಾರ್ ಎಂಬುವವನ್ನು ಸೋಮವಾರ ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಮಂಗಳವಾರ ಪೊಲೀಸರು ಮತ್ತು ಉಗ್ರರ ನಡುವಿನ ದಾಳಿಯಲ್ಲಿ ನದೀಮ್ ಅಬ್ರಾರ್ ಮೃತಪಟ್ಟಿದ್ದಾನೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ವಕ್ತಾರರು ತಿಳಿಸಿದ್ದಾರೆ















