ತಿಹಾರ್ ಜೈಲಿನಲ್ಲಿರುವ 125 ಕೈದಿಗಳಿಗೆ HIV ಪಾಸಿಟಿವ್.

Coastal Bulletin
ತಿಹಾರ್ ಜೈಲಿನಲ್ಲಿರುವ 125 ಕೈದಿಗಳಿಗೆ HIV ಪಾಸಿಟಿವ್.

ನವದೆಹಲಿ: ತಿಹಾರ್ ಜೈಲ್​ನಿಂದ ಬೆಚ್ಚಿ ಬೀಳಿಸುವಂತ ಮಾಹಿತಿಯೊಂದು ಹೊರ ಬಂದಿದೆ. ಜೈಲಿನಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 125 ಜನ ಕೈದಿಗಳು ಹೆಚ್​ಐವಿ ಎಂಬ ಜೀವ ಕಂಟಕ ರೋಗಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಿಹಾರ್ ಜೈಲಿನಲ್ಲಿ ಹೆಚ್​​ಐವಿ ಪಾಸಿಟಿವ್ ಕೇಸ್​ಗಳು ಹೊಸದೇನಲ್ಲ. ಅಲ್ಲಿರುವ 200 ಕೈದಿಗಳಲ್ಲಿ ಲೈಂಗಿಕತೆಗೆ ಸಂಬಂಧಿತ ರೋಗಗಳು ಇರೋದು ಗೊತ್ತಾಗಿದೆ. ಇತ್ತೀಚೆಗಷ್ಟೇ ಒಟ್ಟು 14 ಸಾವಿರ ಕೈದಿಗಳಲ್ಲಿ 10, 500 ಕೈದಿಗಳ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಈ ವೇಳೆ ಇಂತಹದೊಂದು ಆತಂಕಕಾರಿ ವಿಷಯ ಹೊರಗೆ ಬಂದಿದೆ.

ತಿಹಾರ್ ಜೈಲಿನಲ್ಲಿ ಆಗಾಗ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅದರಲ್ಲೂ ತಿಹಾರ್​ ಜೈಲಿಗೆ ನೂತನ ಡಿಜಿಯಾಗಿ ಸತೀಶ್ ಗೋಲಾಚ್​ ಅವರು ಅಧಿಕಾರವಹಿಸಿಕೊಂಡ ಬಳಿಕ ಇದೇ ಮೇ ಹಾಗೂ ಜೂನ್​ನಲ್ಲಿ 10, 500 ಜನ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಲಾಗಿತ್ತು. ಇದರಲ್ಲಿ ಹೆಚ್​ಐವಿ ಪರೀಕ್ಷೆಯೂ ಕೂಡ ಇತ್ತು. ಮೆಡಿಕಲ್ ಸ್ಕ್ರೀನಿಂಗ್

ಬಳಿಕ ಒಟ್ಟು 125 ಕೈದಿಗಳಲ್ಲಿ ಹೆಚ್​ಐವಿ ಪಾಸಿಟಿವ್ ಇರೋದು ಕಂಡು ಬಂದಿವೆ.

ಇದರ ಜೊತೆಗೆ 10,500 ಕೈದಿಗಳ ಪೈಕಿ 200 ಕೈದಿಗಳಲ್ಲಿ ಲೈಂಗಿಕ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಂಡಿವೆ ಮತ್ತು ಸ್ಕಿನ್ ಇನ್ಫೆಕ್ಷನಂತಹ ಕಾಯಿಲೆಗಳೂ ಕೂಡ ಕಾಣಿಸಿಕೊಂಡಿವೆ. ಪರೀಕ್ಷೆಯಾದ ಯಾವುದೇ ಕೈದಿಗಳಲ್ಲಿ ಟಿಬಿಯ ಯಾವುದೇ ಪಾಸಿಟಿವ್ ಕೇಸ್ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ.

Leave a Comment