ಕೋಲ್ಕತಾ : ಜಾರ್ಖಂಡ್ ನ ನಟಿ ರಿಯಾ ಕುಮಾರಿಯನ್ನು ರಾಂಚಿ- ಕೋಲ್ಕತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಬುಧವಾರ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಸುಮಾರು ಹೌರಾ ಜಿಲ್ಲೆಯ ಮಹೀಶ್ ರೇಖಾ ಸೇತುವೆ ಬಳಿ ರಿಯಾ ಕುಮಾರಿ ಅವರು ತಮ್ಮ ಮೂರು ವರ್ಷದ ಮಗಳು ಹಾಗೂ ಗಂಡ ಪ್ರಕಾಶ್ ಕುಮಾರ್ ಅವರೊಡನೆ ರಾಂಚಿಯಿಂದ ಕೋಲ್ಕತ್ತಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.
ಸೇತುವೆ ಬಳಿ ಮೂತ್ರ
ವಿಸರ್ಜನೆಗೆಂದು ಕಾರು ನಿಲ್ಲಿಸಿದಾಗ ಮೂವರು ದುಷ್ಕರ್ಮಿಗಳು ನಮ್ಮ ಬಳಿ ಬಂದು ದರೋಡೆ ಮಾಡುವ ಉದ್ದೇಶದಿಂದ ಹಲ್ಲೆಗೆ ಯತ್ನಿಸಿದರು. ಈ ವೇಳೆ ವಿರೋಧಿಸಲು ಹೋದ ರಿಯಾ ಕುಮಾರಿಗೆ ಗುಂಡು ಹಾರಿಸಿದರು. ಇದರಿಂದ ತೀವ್ರ ರಕ್ತಸ್ರಾವವಾಗಿ ರಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮಾರ್ಗದಲ್ಲಿ ಮೃತಪಟ್ಟಳು.














