ಮಂಗಳೂರಿನಿಂದ ವಿಟ್ಲ ಮತ್ತು ಕಡೆಶಿವಾಲಕ್ಕೆ ಬಸ್ ಪಾಸ್ ಮಾಡಿಸಿದ್ದರು ಕೂಡ 4 ಗಂಟೆ ರಿಂದ 6 ಗಂಟೆ ತನಕ ಯಾವುದೇ ಸರ್ಕಾರಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಖಾಸಗಿ ಬಸ್ ನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಬಿ. ಸಿ. ರೋಡ್ ಮ್ಯಾನೇಜರ್ ಹಾಗೂ ಪುತ್ತೂರು ಮ್ಯಾನೇಜರ್ರವರಿಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ರೀತಿಯ ಸ್ಪಂದನೆ ದೊರೆಯುತ್ತಿಲ್ಲ
ಬಸ್ ಇಲ್ಲದ ಕಾರಣದಿಂದ ವಿದ್ಯಾರ್ಥಿಗಳಿಗೆ ಮನೆಗೆ ತಲಪಲು ತಡವಾಗುತ್ತಿದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀಳುತ್ತಿದೆ. ಇದಕ್ಕೆ ಕ.
ರಾ. ರ. ಸಾ. ನಿ. ನಿಯಂತ್ರಣ ಅಧಿಕಾರಿಗಳ ನಿರ್ಲಕ್ಷ್ಯ ಎನಬೇಕೇ? ಎಂದು ತೋಚುತ್ತಿಲ್ಲ ಎಂದು ಬೇಸತ್ತ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.














