ಕಾಠ್ಮಂಡು: ನೇಪಾಲದ ಪ್ರಧಾನಮಂತ್ರಿಯಾಗಿ ಸಿಪಿಎನ್-ಮಾವೋಯಿಸ್ಟ್ ಸೆಂಟರ್‌ನ ಮುಖಂಡ ಪುಷ್ಪ ಕುಮಾರ್ ದಹಲ್ (ಪ್ರಚಂಡ) ಅವರನ್ನು ನೇಮಿಸಲಾಗಿದೆ. ಮೂರನೇ ಬಾರಿಗೆ ಅವರು ಈ ಹುದ್ದೆ ಅಲಂಕರಿಸಲಿದ್ದಾರೆ.
ನೇಪಾಲ ಕಾಂಗ್ರೆಸ್ ನೇತೃತ್ವದ ಐದು ಪಕ್ಷಗಳ ಮೈತ್ರಿಕೂಟದಿಂದ ಅವರ ಪಕ್ಷ ಬೆಂಬಲ ವಾಪಸ್ ಪಡೆದ ಬಳಿಕ ಈ ಬೆಳವಣಿಗೆ ನಡೆದಿದೆ.
ಅವರಿಗೆ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸಿಪಿಎನ್-ಯುಎಂಎಲ್ ಪಕ್ಷದ ಬೆಂಬಲವೂ ಸಿಕ್ಕಿದೆ. ಜತೆಗೆ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (ಆರ್‌ಎಸ್‌ಪಿ) ಕೂಡ ಬೆಂಬಲ ನೀಡಿದೆ.
275 ಮಂದಿ ಸದಸ್ಯರು
ಇರುವ ಸಂಸತ್‌ನಲ್ಲಿ ಪ್ರಚಂಡ ಅವರಿಗೆ ಒಟ್ಟು 165 ಮಂದಿ ಸಂಸದರು ಬೆಂಬಲ ನೀಡಿದ್ದಾರೆ. ಈ ಬಗ್ಗೆ ಸಂಸದರ ಸಹಿ ಇರುವ ಪತ್ರವನ್ನು ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರಿಗೆ ಕಳುಹಿಸಿಕೊಡಲಾಗಿದೆ. ಪ್ರಚಂಡ ಅವರ ನೇಮಕ ಭಾರತ ಮತ್ತು ನೇಪಾಲ ನಡುವಿನ ಬಾಂಧವ್ಯಕ್ಕೆ ಹೆಚ್ಚು ಉತ್ತೇಜನಕಾರಿಯಾಗಿ ಇರದು ಎಂದು ಹೇಳಲಾಗುತ್ತಿದೆ.














