ಹಿಂಸಾಚಾರಕ್ಕೆ ತಿರುಗಿದ ಲಡಾಖ್‌ ಪ್ರತಿಭಟನೆ; 4 ಮಂದಿ ಸಾವು, 70 ಜನರಿಗೆ ಗಾಯ

Coastal Bulletin
ಹಿಂಸಾಚಾರಕ್ಕೆ ತಿರುಗಿದ ಲಡಾಖ್‌ ಪ್ರತಿಭಟನೆ; 4 ಮಂದಿ ಸಾವು, 70 ಜನರಿಗೆ ಗಾಯ

ಲಡಾಖ್: ಲಡಾಖ್​​ಗೆ ರಾಜ್ಯ ಸ್ಥಾನಮಾನವನ್ನು ನೀಡಲು ಒತ್ತಾಯಿಸಿ ನಡೆಸಿದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಇಂದು 4 ಜನರು ಸಾವನ್ನಪ್ಪಿದ್ದಾರೆ ಮತ್ತು 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗದೆ ಲಡಾಖ್ (Ladakh) ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇಂದಿನ ಗಲಭೆಯ ವೇಳೆ ಸ್ಥಳೀಯ ಬಿಜೆಪಿ ಕಚೇರಿಗೆ ಕೂಡ ಬೆಂಕಿ ಹಚ್ಚಲಾಯಿತು. ಪ್ರತಿಭಟನಾಕಾರರು ಬೆಂಕಿ ಹಚ್ಚಿ ವಾಹನವನ್ನು ಸಹ ಸುಟ್ಟುಹಾಕಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರು.

ಅಶಾಂತಿಯ ನಂತರ, ಲೇಹ್ ಲಡಾಖ್‌ನಲ್ಲಿ ಕೇಂದ್ರ ಆಡಳಿತವು ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ (BNSS), 2023ರ ಸೆಕ್ಷನ್ 163 ರ ಅಡಿಯಲ್ಲಿ ಕರ್ಫ್ಯೂ ವಿಧಿಸಿತು. ಹೀಗಾಗಿ, ಈ ಭಾಗದಲ್ಲಿ

ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಲೇಹ್‌ನಲ್ಲಿ ಪೂರ್ವ ಲಿಖಿತ ಅನುಮೋದನೆಯಿಲ್ಲದೆ ಯಾವುದೇ ಮೆರವಣಿಗೆ, ರ್ಯಾಲಿ ಅಥವಾ ಮೆರವಣಿಗೆ ನಡೆಸಬಾರದು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

Leave a Comment