ಶಿಂಧೆ ವಿರುದ್ಧ ಆರೋಪಿಸಿದ್ದ ಕಾಮಿಡಿಯನ್‌ಗೆ ಮತ್ತೊಂದು ಸಂಕಷ್ಟ! ಮುಂಬೈನಲ್ಲಿ ಕುನಾಲ್ ಕಮ್ರಾ ಸ್ಟುಡಿಯೋ ಧ್ವಂಸ!

Coastal Bulletin
ಶಿಂಧೆ ವಿರುದ್ಧ ಆರೋಪಿಸಿದ್ದ ಕಾಮಿಡಿಯನ್‌ಗೆ ಮತ್ತೊಂದು ಸಂಕಷ್ಟ! ಮುಂಬೈನಲ್ಲಿ ಕುನಾಲ್ ಕಮ್ರಾ ಸ್ಟುಡಿಯೋ ಧ್ವಂಸ!

ಮುಂಬೈ: ಹಾಸ್ಯನಟ ಕುನಾಲ್ ಕಮ್ರಾ (Kunal Kamra) ಅವರ ಕಾರ್ಯಕ್ರಮವೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಇದರ ಪರಿಣಾಮವಾಗಿ ಭಾನುವಾರ, ಶಿವಸೇನಾ (Shiv Sena) ಕಾರ್ಯಕರ್ತರು ಖಾರ್ ಪ್ರದೇಶದ ಹೋಟೆಲ್‌ಗೆ ನುಗ್ಗಿ ಕಮ್ರಾ ಅವರ ಕಾರ್ಯಕ್ರಮದಲ್ಲಿ ಗದ್ದಲ ಸೃಷ್ಟಿಸಿದರು. ಆದರೆ, ಇದೀಗ ಮಹಾರಾಷ್ಟ್ರ (Maharashtra) ಸರ್ಕಾರವು ಕುನಾಲ್ ಕಮ್ರಾಗೆ ಸಂಬಂಧಿಸಿದ ಸ್ಟುಡಿಯೋದ ಕೆಲ ಭಾಗಗಳನ್ನು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕೆಡವಲು ಪ್ರಾರಂಭಿಸಿದೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು "ದೇಶದ್ರೋಹಿ" ಎಂದು ಟೀಕಿಸಿದ ಕುನಾಲ್ ಕಮ್ರಾ ಅವರ ವಿರುದ್ದ ಶಿವಸೈನಿಕರು ಉಗ್ರ ರೂಪತಾಳಿದೆ. ಇದರ ನಡುವೆ, ಬೃಹತ್​ ಮುಂಬೈ ನಗರ ಪಾಲಿಕೆಯು, ಹಾಸ್ಯನಟ ಕುನಾಲ್ ಕಮ್ರಾ ಅವರಿಗೆ ಸಂಬಂಧಿಸಿದ ಖಾರ್‌ನಲ್ಲಿರುವ ಹ್ಯಾಬಿಟ್ಯಾಟ್ ಸ್ಟುಡಿಯೋದ "ಅಕ್ರಮ" ಭಾಗಗಳನ್ನು ಕೆಡವಲು ಪ್ರಾರಂಭಿಸಿದೆ. ಆದರೆ, ಅಕ್ರಮ ಎಂಬ ಆರೋಪದ

ಉಲ್ಲಂಘನೆಗಳ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

ಸ್ಟುಡಿಯೋವನ್ನು ಧ್ವಂಸಗೊಳಿದ 12 ಪ್ರತಿಭಟನಾಕಾರರ ಬಂಧನ

ಏತನ್ಮಧ್ಯೆ, ಕಾಮ್ರಾ ಅವರ ಆಕ್ಷೇಪಾರ್ಹ ಹೇಳಿಕೆಗಳಿಂದ ಆಕ್ರೋಶಗಳು ತೀವ್ರಗೊಳ್ಳುತ್ತಿದ್ದಂತೆ, ಮುಂಬೈ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಮುಚ್ಚುವುದಾಗಿ ಅದರ ಆಡಳಿತ ಮಂಡಳಿ ಘೋಷಿಸಿದೆ. ಮುಂದುವರೆದು, ಹಾಸ್ಯನಟನ ಹೇಳಿಕೆಯಿಂದ ಉಂಟಾದ ಕೋಲಾಹಲದಲ್ಲಿ ಶಿವಸೇನೆ (ಶಿಂಧೆ ಬಣ) ಸದಸ್ಯರು ಸ್ಟುಡಿಯೋವನ್ನು ಧ್ವಂಸಗೊಳಿದ 12 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

Leave a Comment