ಚಂದ್ರಲೋಕದಲ್ಲಿ ಇತಿಹಾಸ ಬರೆದ ಭಾರತ- ಚಂದ್ರಯಾನ 3 ಯಶಸ್ವಿ.

Coastal Bulletin
ಚಂದ್ರಲೋಕದಲ್ಲಿ ಇತಿಹಾಸ ಬರೆದ ಭಾರತ- ಚಂದ್ರಯಾನ 3 ಯಶಸ್ವಿ.

ಬೆಂಗಳೂರು: ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕುತೂಹಲದಿಂದ ಕಾದು ನೋಡುತ್ತಿದ್ದ ಇಸ್ರೋದ ಚಂದ್ರಯಾನ-3 ಚಂದ್ರನ ಮೇಲ್ಮೈನಲ್ಲಿ ಸಾಫ್ಟ್ ಆಗಿ ಲ್ಯಾಂಡ್ ಆಗಿದ್ದು ಭಾರತವು ಈ ಮೂಲಕ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಸ್ರೋ ಚಂದ್ರಯಾನ-3 ರ ಲ್ಯಾಂಡಿಂಗ್‌ಗೆ ಸಂಜೆ 6.04 ಕ್ಕೆ ಸಮಯ ನಿಗದಿಪಡಿಸಿತ್ತು. ಇಸ್ರೋ ಈ ಪ್ರಯತ್ನ ದಿಂದ  ಯುಎಸ್, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟಗಳ ಬಳಿಕ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಭಾರತವಾಗಿದೆ.  ಇಲ್ಲಿಯವರೆಗೆ ಯುಎಸ್, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟಗಳು ಈ ತಂತ್ರವನ್ನು ಕರಗತ ಮಾಡಿಕೊಂಡಿವೆ, ಆದರೂ ಅವರ

'ಸಾಫ್ಟ್ ಲ್ಯಾಂಡಿಂಗ್' ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಂಭವಿಸಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. 

ಭಾರತಕ್ಕಷ್ಟೆ ಅಲ್ಲ, ಇಡೀ ವಿಶ್ವಕ್ಕೆ ಚಂದ್ರಯಾನ-3 ಏಕೆ ಮುಖ್ಯವಾಗಿದೆ? 

ಹೌದು, ಚಂದ್ರಯಾನ 3 ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವದ ವೈಜ್ಞಾನಿಕ ಸಮುದಾಯಕ್ಕೂ ಮುಖ್ಯವಾಗಿದೆ.  ಇದು ಚಂದ್ರನ ಬಗ್ಗೆ ಮಾತ್ರವಲ್ಲ, ಇತರ ಗ್ರಹಗಳ ಬಗ್ಗೆಯೂ ಭವಿಷ್ಯದ ಬಾಹ್ಯಾಕಾಶ ಸಂಶೋಧನೆಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ ಎಂಬ ಆಶಯ ನಮ್ಮ ವಿಜ್ಞಾನಿಗಳದ್ದಾಗಿದೆ.

Leave a Comment