Coastal Bulletin

ಬೀಜಿಂಗ್‌, ಮಾರ್ಚ್ 21: ದಕ್ಷಿಣ ಚೀನಾದಲ್ಲಿ ಬೋಯಿಂಗ್ 737 ಪ್ರಯಾಣಿಕ ವಿಮಾನವು ಪತನವಾಗಿದ್ದು, ಈ ವಿಮಾನದಲ್ಲಿ 133 ಮಂದಿ ಪ್ರಯಾಣಿಕರು ಇದ್ದರು ಎಂದು ವರದಿಯು ಉಲ್ಲೇಖ ಮಾಡಿದೆ. ಆದರೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

133 ಜನರಿದ್ದ ಪ್ರಯಾಣಿಕ ವಿಮಾನವು ದಕ್ಷಿಣ ಚೀನಾದ ಗುವಾಂಗ್‌ಕ್ಸಿ ಪ್ರಾಂತ್ಯದಲ್ಲಿ ಪತನಗೊಂಡಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದ, ವೇಳೆ ಯಾವುದೇ ಸಾವು ನೋವುಗಳ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಇದು ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಹೋಗುವ ಮಾರ್ಗದಲ್ಲಿ ಚೀನಾ ಸದರ್ನ್‌ನಿಂದ

ನಿರ್ವಹಿಸಲ್ಪಡುವ ಬೋಯಿಂಗ್-737 ಆಗಿತ್ತು. 133 ಜನರು ಈ ವಿಮಾನದಲ್ಲಿ ಇದ್ದರು. ಟೆಂಗ್‌ಕ್ಸಿಯಾನ್ ಕೌಂಟಿ, ವುಝೌ, ಗುವಾಂಗ್‌ಕ್ಸಿಯಲ್ಲಿ ಪರ್ವತದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ.

ಇನ್ನು ಈ ಬಗ್ಗೆ ಚೀನಾದ ಅಧಿಕಾರಿಗಳು  ಯಾವುದೇ ಸ್ಪಷ್ಟ  ಮಾಹಿತಿಯನ್ನು ನೀಡಿಲ್ಲ. 

Leave a Comment