Coastal Bulletin

ದೆಹಲಿ: ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಧರಣಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದ ಸಿಪಿಐ ನಾಯಕಿ ಬೃಂದಾ ಕಾರಾಟ್‌ಗೆ ಮುಖಭಂಗವಾಗಿದೆ. ಇದು ಕ್ರೀಡಾಪಟುಗಳ ಧರಣಿ, ಇದನ್ನು ರಾಜಕೀಯ ಮಾಡಬೇಡಿ. ನೀವು ವೇದಿಕೆಯಿಂದ ಕೆಳಗಿಳಿಯಿರಿ ಎಂದು ಭಜರಂಗ ಪೂನಿಯಾ ಸೇರಿದಂತೆ ಕುಸ್ತಿಪಟುಗಳು ಹೇಳಿದ ಘಟನೆ ನಡೆದಿದೆ

ಭಾರತೀಯ ಕುಸ್ತಿ ಫೆಡರೇಶನ್ ಹಾಗೂ ಕುಸ್ತಿಪಟುಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ ಮಾಡಿರುವ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಭಾರತದ ಖ್ಯಾತ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಹಲವು

ಕ್ರೀಡಾಪಟುಗಳು ಈ ಧರಣಿಯ ನೇತೃತ್ವ ವಹಿಸಿದ್ದಾರೆ. ಈ ಧರಣಿಯಲ್ಲಿ ಪಾಲ್ಗೊಳ್ಳಲು ಬಂದ ಸಿಪಿಐ ನಾಯಕಿ ಬೃಂದಾ ಕಾರಾಟ್‌ಗೆ ಮುಖಭಂಗವಾಗಿದೆ. ವೇದಿಕೆಗೆ ಆಗಮಿಸಿದ ಬೃಂದಾ ಕಾರಾಟ್ ಹಾಗೂ ಎಡಪಕ್ಷಗಳ ನಾಯಕಿರನ್ನು ವೇದಿಕೆಯಿಂದ ಹೊರಕಳುಹಿಸಿದ ಘಟನ ನಡೆದಿದೆ. ಇದು ಕ್ರೀಡಾಪಟುಗಳ ಧರಣಿ. ಇದನ್ನು ರಾಜಕೀಯ ಮಾಡಬೇಡಿ, ದಯವಿಟ್ಟು ವೇದಿಕೆಯಿಂದ ಹೊರನಡೆಯಿರಿ ಎಂದು ಕುಸ್ತಿಪಟು ಭಜರಂಗ್ ಪೂನಿಯಾ ಹೇಳಿದ್ದಾರೆ.

Leave a Comment