Coastal Bulletin

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ನಡುಬೈಲು ಎಂಬಲ್ಲಿ ಕಲಾ ಸಂಗಮ ಮತ್ತು ಹಿಂದು ಜಾಗರಣ ವೇದಿಕೆ ಇದರ ಆಶ್ರಯದಲ್ಲಿ 29ನೇ ವಾರ್ಷಿಕೋತ್ಸವದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ಜ.30 ರಂದು ಪುದು ಗ್ರಾಮದ ಹೊಯ್ಗೆಗದ್ದೆ ಶ್ರೀ ರಾಮ ಮಂದಿರದ ವಠಾರದಲ್ಲಿ ನಡೆಯಲಿದೆ.

ಜ.30 ರಂದು ಮಧ್ಯಾಹ್ನ 3 ಗಂಟೆಗೆ ನಡುಬೈಲು ದಿ.ಕೃಷ್ಣ ಭಟ್ ರವರ ಮನೆಯಿಂದ ಚೌಕಿಗೆ ಮೇಳದ ದೇವರ ಮೆರವಣಿಗೆ ನಡೆಯಲಿದೆ. ನಂತರ ಶ್ರೀ ರಾಮ ಭಜನಾ ಮಂದಿರ ಇವರಿಂದ ಭಜನೆ ಇರಲಿದೆ . ನಂತರ 3.30 ಕ್ಕೆ ಸಾಮೂಹಿಕ

ಶ್ರೀ ಸತ್ಯ ನಾರಾಯಣ ಪೂಜೆ, 5.30 ಕ್ಕೆ ಚೌಕಿ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 6 ಗಂಟೆಗೆ ಗರುಡೋದ್ಭವ ಎಂಬ ಯಕ್ಷಗಾನ ಬಯಲಾಟ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಜರುಗಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment