ನವದೆಹಲಿ: ಇರಾನ್ – ಅಮೆರಿಕ ಮಧ್ಯೆ ಮತ್ತೆ ಯುದ್ಧ ಕಾರ್ಮೋಡ ಕವಿದಿದೆ. ಈ ಮಧ್ಯೆ ಬೆಳ್ಳಂಬೆಳಗ್ಗೆ ದೇಶದ ಜನರಿಗೆ ದೊಡ್ಡ ಶಾಕ್ ಎದುರಾಗಿದೆ. ಮಂಗಳವಾರ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪ್ರತಿ ಲೀ.ಗೆ ಸುಮಾರು 90 ಪೈಸೆ ಹೆಚ್ಚಿಸಿವೆ. ಇದು ಒಂದು ವಾರದೊಳಗೆ 2ನೇ ಬಾರಿ ಏರಿಕೆಯಾಗಿದೆ.
ಮೇ 15 ರ ಶುಕ್ರವಾರ ಪ್ರತಿ ಲೀ.ಗೆ ಏಕಾಏಕಿ 3 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದಾದ ಮೂರು ದಿನಗಳಲ್ಲಿ ಮತ್ತೆ ಪೆಟ್ರೋಲ್ ದರ ಏರಿಕೆ ಮಾಡಲಾಗಿದೆ. ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 94.77 ರೂ. ನಿಂದ 97.77 ರೂ.ಗಳಿಗೆ ತಲುಪಿತ್ತು, ಡೀಸೆಲ್ ಲೀಟರ್‌ಗೆ 87.67 ರೂ. ಗಳಿಂದ 90.67 ರೂ.ಗಳಿಗೆ ಏರಿಕೆಯಾಗಿತ್ತು. ಇದೀಗ ಮತ್ತೆ ದರ ಏರಿಕೆ ಮಾಡಿದ್ದು, ಸಾರ್ವಜನಿಕರಿಗೆ ಭಾರೀ ಹೊಡೆತ ನೀಡಿದೆ.
ಮಾರುಕಟ್ಟೆ ವಿಶ್ಲೇಷಕರು ಮತ್ತು ಕೈಗಾರಿಕಾ ಮೂಲಗಳ ಪ್ರಕಾರ, ಈ ಹೆಚ್ಚಳವು ಜಾಗತಿಕವಾಗಿ ನಡೆಯುತ್ತಿರುವ ರಾಜತಾಂತ್ರಿಕ
ಮತ್ತು ಮಿಲಿಟರಿ ಬಿಕ್ಕಟ್ಟಿನ ನೇರ ಪರಿಣಾಮವಾಗಿದೆ. ಯುಎಸ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಿದಂತೆ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಹೀಗಾಗಿ ಕಚ್ಚಾತೈಲ ಪ್ರತಿ ಬ್ಯಾರಲ್‌ಗೆ 100 ಡಾಲರ್‌ಗಿಂತಲೂ ಹೆಚ್ಚಾಗಿದೆ ಎನ್ನಲಾಗಿದೆ.
ಕಚ್ಚಾ ತೈಲ ಬೆಲೆ ಹೆಚ್ಚಳವು ಭಾರತೀಯ ಸಂಸ್ಕರಣಾ ಕಂಪನಿಗಳಿಗೆ ನಿತ್ಯ ಭಾರೀ ನಷ್ಟ ಉಂಟು ಮಾಡುತ್ತಿವೆ. ಹೀಗಾಗಿ ಕಳೆದ ವಾರ 3 ರೂ. ಹೆಚ್ಚಳ ಮಾಡಲಾಗಿತ್ತು. ಈ ದರ ಏರಿಕೆಯು ತೈಲ ಕಂಪನಿಗಳಿಗೆ ಶೇ.25 ರಷ್ಟು ನಷ್ಟ ತಪ್ಪಿಸಿತ್ತಯ. ಈ ಬೆನ್ನಲ್ಲೇ ಹೊಸದಾಗಿ ಮತ್ತೆ ದರ ಏರಿಕೆ ಮಾಡಿದೆ.














