ಬಂಟ್ವಾಳ: ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ನೂತನ ಅಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು ಹಾಗೂ ತಂಡದ ಪದಗ್ರಹಣ ಸಮಾರಂಭವು ಅವರು .18 ರಂದು ಸೋಮವಾರ ಸಂಜೆ ಬಿ.ಸಿ.ರೋಡು ಕೈಕಂಬ ದ್ವಾರದಲ್ಲಿರುವ ಅಕ್ಷಯ ಸೌಧ ಅಕ್ಷಯ ಸಭಾಂಗಣದಲ್ಲಿ ನಡೆಯಿತು.
ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಉಪಾಧ್ಯಕ್ಷೆ ಅಕ್ಷತಾ ಆರ್ ನೂತನ ಅಧ್ಯಕ್ಷರಿಗೆ ಪ್ರತಿಜ್ಞಾವಿಧಿ ಬೋದಿಸಿ ಬಳಿಕ ಮಾತನಾಡಿ, ಮನುಷ್ಯ ಬದುಕಿರುವಾಗ ಸಮಾಜಕ್ಕಾಗಿ ಸ್ವಲ್ಪವಾದರೂ ಸೇವೆ ಮಾಡಬೇಕು, ಸಮಾಜಮುಖಿ ಬದುಕಿಗೆ ದೇವರ ಅನುಗ್ರಹವಿದೆ, ನೂತನ ಸಮಿತಿಯು ತಂಡವಾಗಿ ಕೆಲಸ ಮಾಡಿದರೆ ಸಂಸ್ಥೆ ಉನ್ನತಿಯಾಗಲು ಸಾಧ್ಯ ಎಂದು ಹೇಳಿ ನೂತನ ತಂಡಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿ ಉದ್ಯಮಿ ಐತಪ್ಪ ಆಳ್ವ ಸುಜೀರುಗುತ್ತು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ವಿದ್ಯಾವಂತ ಜನರೇ ಭ್ರಷ್ಟ ವ್ಯವಸ್ಥೆ ನಿರ್ಮಾಣಕ್ಕೆ ಕಾರಣಿಕರ್ತರಾಗಿದ್ದಾರೆ, ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳ ಸದಸ್ಯರಾಗುವ ಮೂಲಕ ಸಮಾಜಕ್ಕೆ ಒಳ್ಳೆಯ ಸೇವೆ ಹಾಗೂ ಸಂದೇಶವನ್ನು ಕೊಡುವ ಅಗತ್ಯತೆ ಇದೆ ಎಂದರು.
ನೂತನ ಅಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತೇವು ಅಧಿಕಾರ ಸ್ವೀಕರಿಸಿ ಮಾತನಾಡಿ, ಸಂಘಟನೆ ಬೆಳೆಯಲು ಹೊಸತನ ಬೇಕು, ಆತ್ಮೀಯತೆ ಹಂಚಿದಾಗ ಸಂಘಟನೆ ಭದ್ರವಾಗುತ್ತದೆ, ಸಾಕಾರಾತ್ಮಕ ಚಿಂತನೆಯಿಂದ ಇನ್ನಷ್ಟು ಗಟ್ಟಿಯಾಗುತ್ತದೆ,ನಾವು ಸಂಸ್ಕಾರವಂತರಾಗಿ ಇತರರಿಗೆ ಮಾದರಿಯಾಗಬೇಕು, ಜವಾಬ್ದಾರಿಗಳನ್ನು ನಿರ್ವಹಿಸಿದಾಗ ಯಶಸ್ವಿ ನಾಯಕರಾಗಳು ಸಾಧ್ಯ. ಆಗ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಹೇಳಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ನೇತ್ರಾವತಿ ಸಂಗಮದ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ ಹಾಗೂ ನಿಕಟ ಪೂರ್ವ ಕಾರ್ಯದರ್ಶಿ ನ್ಯಾಯವಾದಿ
ಶೈಲಜಾ ರಾಜೇಶ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಹಾಗೂ ರಾಷ್ಟ ಮಟ್ಟದ ಸಾಧಕ ವಿದ್ಯಾರ್ಥಿಗಳಾದ ಕು ಇಶಾ ಅನ್ವಿ, ಕು ಪೂರ್ವಿ ಜೆ ಬಂಗೇರ, ಕು ಅನರ್ಘ್ಯ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.
ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಸಾಧಕ ವಿದ್ಯಾರ್ಥಿಗಳಾದ ಕು ಅನನ್ಯ ಭಟ್, ಕು ಶ್ರೀರಕ್ಷಾ ರಾವ್,ಕು ಜಿಶಾ ಪಿ, ತುಷಾರ್ ಹೆಚ್ ಪಿ,ಶಾನೆಲ್ ಸಿಕ್ವೆರಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ನೂತನ ಕಾರ್ಯದರ್ಶಿ ರೇಖಾ ರಾವ್, ಕೋಶಾಧಿಕಾರಿ ಪಿ ಮುಹಮ್ಮದ್, ನಿಕಟ ಪೂರ್ವ ಕೋಶಾಧಿಕಾರಿ ಹರೀಶ್ಚಂದ್ರ ಆಳ್ವ ಪಿ ಉಪಸ್ಥಿತರಿದ್ದರು.
ರಾಜರಾಮ ಐತಳ್, ಗಿರಿಧರ್ ಗೌಡ, ರಾಮಕೃಷ್ಣ ರಾವ್, ಪ್ರಮೀಳಾ ಮಾಣೂರು, ಗ್ರೇಸಿ ಮೇಬಲ್ ಲಾಸ್ರದೋ, ಅಶೋಕ್ ಕುಮಾರ್ ಬರಿಮಾರು ನೂತನ ಸದಸ್ಯರಾಗಿ ಆಯ್ಕೆಯಾದರು.
ಪ್ರಮುಖರಾದ ಮಾಜಿ ಅಧ್ಯಕ್ಷ ಡಾ. ಆನಂದ ಬಂಜನ್, ಉಪಾಧ್ಯಕ್ಷ ಪುರುಷೋತ್ತಮ್ ಕೊಟ್ಟಾರಿ,ಪ್ರಗತಿಪರ ಕೃಷಿಕ ಕರುಣೆಂದ್ರ ಪೂಜಾರಿ,ಜಯ ಗಣೇಶ್,ಸಚ್ಚಿದಾನಂದ ರೈ,ಸುಭಾಸ್ಚಂದ್ರ ಜೈನ್, ಯೋಗೀಶ್ ಬಂಗೇರ ಪ್ರದೀಪ್ ರಾಜ್ ಕಾರ್ಕಳ, ಹರೀಶ್ ರೈ ,ನವೀನ್ ಚಾಪೆ,ವಿಜಯ ಕುಮಾರ್ ಅಡ್ಯಾರ್ ಮತ್ತಿತರರು ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಆದಿರಾಜ ಜೈನ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸನ್ಮತಿ ಜೈನ್ ಇಂದ್ರ ಸನ್ಮಾನ ಪತ್ರ ವಾಚಿಸಿದರು, ಕು ರಕ್ಷಾ ಪ್ರಾರ್ಥಿಸಿದರು, ಅಕ್ಬರ್ ಅಲಿ ಧನ್ಯವಾದವಿತ್ತು ಶೈಲಜಾ ರಾಜೇಶ್ ಹಾಗೂ ರೇಖಾ ರಾವ್ ಕಾರ್ಯಕ್ರಮ ನಿರೂಪಿಸಿದರು .














