ನಾಣ್ಯ: ಕುಲಾಲ ಸುಧಾರಕ ಸಂಘ (ರಿ.) ಮೇ 17ರಂದು 33ನೇ ವಾರ್ಷಿಕೋತ್ಸವ ಸಮಾರಂಭ.

Coastal Bulletin
ನಾಣ್ಯ: ಕುಲಾಲ ಸುಧಾರಕ ಸಂಘ (ರಿ.) ಮೇ 17ರಂದು 33ನೇ ವಾರ್ಷಿಕೋತ್ಸವ ಸಮಾರಂಭ.

ಬಂಟ್ವಾಳ :ಕುಲಾಲ ಸುಧಾರಕ ಸಂಘ (ರಿ.) ನಾಣ್ಯ ಫರಂಗಿಪೇಟೆ ಇದರ 33ನೇ ವಾರ್ಷಿಕ ಮಹಾಸಭೆ ಶ್ರೀ ಸತ್ಯನಾರಾಯಣ ಪೂಜೆ ವಾರ್ಷಿಕೋತ್ಸವ ಸಂಭ್ರಮವು ಮೇ 17ರಂದು ಆದಿತ್ಯವಾರ ಕುಲಾಲ ಸಮುದಾಯ ಭವನ ನಾಣ್ಯ ಮಾರಿಪಳ್ಳದಲ್ಲಿ ನಡೆಯಲಿದೆ

ಕಾರ್ಯಕ್ರಮದ ವಿವರ :

ಬೆಳಿಗ್ಗೆ ಗಂಟೆ 9.00ರಿಂದ ಶ್ರೀ ರಾಮ ನಾಮ ತಾರಕ ಮಂತ್ರ ಜಪ,  9.30 ರಿಂದ ವಾರ್ಷಿಕ ಮಹಾಸಭೆ, 11.00ರಿಂದ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ ಬಳಿಕ ಪ್ರಸಾದ ವಿತರಣೆ ಅನ್ನಸಂತರ್ಪಣೆ.

ಮಧ್ಯಾಹ್ನ 2.00ರಿಂದ ಸಂಗೀತ ಸ್ಪರ್ಧೆ, 3.00ರಿಂದ ವಾರ್ಷಿಕೋತ್ಸವದ

ಸಭಾ ಕಾರ್ಯಕ್ರಮ. ಮಧ್ಯಾಹ್ನ  ಪ್ರತಿಭಾ ಪುರಸ್ಕಾರ,ಸಂಜೆ ಗಂಟೆ 6-00ರಿಂದ ಕುಲಾಲ ಸೇವಾದಳದ ಸದಸ್ಯೆಯರಿಂದ ಹಾಗೂ ಮಕ್ಕಳಿಂದ ನೃತ್ಯ ವೈವಿಧ್ಯತೆ.ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷ ಹಾಸ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರ. ಕಾರ್ಯದರ್ಶಿ ವಿಶ್ವನಾಥ ಕುಲಾಲ್ ನೆತ್ತರಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Comment