ವಾಹನಗಳ ಫಾಸ್ಟ್ ಟ್ಯಾಗ್ ಕೆವೈಸಿ ( Fastag KYC) ಕಡ್ಡಾಯ, ಜ.31ಕೊನೆಯ ದಿನಾಂಕ.

Coastal Bulletin
ವಾಹನಗಳ ಫಾಸ್ಟ್ ಟ್ಯಾಗ್ ಕೆವೈಸಿ ( Fastag KYC) ಕಡ್ಡಾಯ, ಜ.31ಕೊನೆಯ ದಿನಾಂಕ.

ನವದೆಹಲಿ: ಫಾಸ್ಟ್ಯಾಗ್‌ ಬಳಕೆದಾರರು ಬೇರೆ ಬೇರೆ ವಾಹನಗಳಿಗೆ ಒಂದೇ ಫಾಸ್ಟ್ಯಾಗ್‌ ಅಥವಾ ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್‌ ಬಳಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ ಅಭಿಯಾನವನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್‌ ಹೊಂದಿರುವ ವಾಹನ ಮಾಲೀಕರು, ಫಾಸ್ಟ್ಯಾಗ್‌ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಲು ಜನವರಿ 31ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ಇದೇ ವೇಳೆ, ಇ-ಕೆವೈಸಿ ಭರ್ತಿಯ ಜತೆಗೆ ಜನವರಿ 31ರೊಳಗೆ ತಮ್ಮ ಬಳಿ ಇರುವ ಹಲವು ಫಾಸ್ಟ್ಯಾಗ್‌ಗಳ ಪೈಕಿ ಇತ್ತೀಚೆಗೆ ಖರೀದಿಸಿದನ್ನು ಹೊರತುಪಡಿಸಿ ಉಳಿದದ್ದನ್ನು (ಇದ್ದರೆ) ಬ್ಯಾಂಕ್‌ಗೆ ಒಪ್ಪಿಸಬೇಕು. ಬಳಿಕ ಗ್ರಾಹಕರ ಬಳಿ ಇರುವ ತೀರಾ ಇತ್ತೀಚಿನ ಫಾಸ್ಟ್ಯಾಗ್‌ ಹೊರತುಪಡಿಸಿ ಉಳಿದಿದ್ದೆಲ್ಲಾ ನಿಷ್ಕ್ರಿಯವಾಗುತ್ತದೆ. ಒಂದು ವೇಳೆ ಇ - ಕೆವೈಸಿ ಮಾಡಿಸದೇ ಇದ್ದರೆ ಫಾಸ್ಟ್ಯಾಗ್‌ನಲ್ಲಿ ಹಣ ಇದ್ದ ಹೊರತಾಗಿಯೂ ಅದು ಬಳಕೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇತ್ತೀಚೆಗೆ ಒಂದೇ ಫಾಸ್ಟ್ಯಾಗನ್ನು ಬೇರೆ ಬೇರೆ ವಾಹನಗಳಿಗೆ ಬಳಸುವುದು ಹಾಗೂ ಒಂದೇ ವಾಹನಕ್ಕೆ ಬೇರೆ ಬೇರೆ ಫಾಸ್ಟ್ಯಾಗ್ ಲಿಂಕ್‌ ಮಾಡುವ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಎನ್‌ಎಚ್ಎಐ ಬಿಗಿ ಕ್ರಮ ತೆಗೆದುಕೊಂಡಿದೆ. ‘ಇದು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಂ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ’ ಎಂದು ಅದು ಹೇಳಿದೆ. ಈಗಾಗಲೇ ದೇಶದಲ್ಲಿ 8 ಕೋಟಿ

ಫಾಸ್ಟ್ಯಾಗ್‌ ಬಳಕೆದಾರರಿದ್ದಾರೆ ಹಾಗೂ ಶೇ.98ರಷ್ಟು ವಾಹನಗಳು ಫಾಸ್ಟ್ಯಾಗ್‌ಗೆ ಒಳಪಟ್ಟಿವೆ.


ಇ ಕೇವೈಸಿ ಮಾಡಲು ಬೇಕಾದ ದಾಖಲೆಗಳು ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪಾನ್‌ ಸಂಖ್ಯೆ, ಆಧಾರ್‌ ಸಂಖ್ಯೆ, ನರೇಗಾ ಅಥವಾ ಸರ್ಕಾರಿ ದಾಖಲೆಗಳು, ವಾಹನದ ನೋಂದಣಿ ಪ್ರಮಾಣಪತ್ರ.

ಸಮೀಪದ ಬ್ಯಾಂಕ್‌ಗೆ ತೆರಳಿ ಕೆವೈಸಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿ ತುಂಬಿ ಬ್ಯಾಂಕ್‌ಗೆ ಫಾರ್ಮ್‌ ಸಲ್ಲಿಕೆ ಮಾಡಿ ಕೆವೈಸಿ ಮಾಡಬಹುದಾಗಿದೆ.

Leave a Comment