ಮುಂಬಯಿ : ಲಕ್ನೋದ ಕಂಪನಿಯೊಂದಕ್ಕೆ ಸಂಬಂಧಿಸಿದಂತೆ ನಟ ಸೋನು ಸೂದ್ ಅವರ ನಿವಾಸ ಹಾಗೂ ಕಛೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಆದಾಯ ತೆರಿಗೆ ಇಲಾಖೆಯು ನಟ ಸೋನು ಸೂದ್ ಅವರ ಮುಂಬೈನ ನಿವಾಸ,ಕಛೇರಿ ಮತ್ತು ಲಕ್ನೋದಲ್ಲಿರುವ ಕಂಪನಿಯ ಮೇಲೆ ದಾಳಿ ನಡೆಸಿದೆ. "ಸೋನು ಸೂದ್ ಕಂಪನಿ ಮತ್ತು ಲಕ್ನೋ ಮೂಲದ
ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿನ ಒಪ್ಪಂದವು ಸ್ಕ್ಯಾನರ್ನಲ್ಲಿದೆ. ಈ ಒಪ್ಪಂದದ ಮೇಲೆ ತೆರಿಗೆ ವಂಚನೆಯ ಆರೋಪದ ಮೇಲೆ ಸಮೀಕ್ಷೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ" ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ.















