Coastal Bulletin

ಕಡಬ : ಹಿಂದು ಜನಜಾಗೃತಿ ಸಭೆ ಗಣೇಶ ಕಟ್ಟೆ ಉದನೆಯಲ್ಲಿ ಮಂಗಳವಾರ ನಡೆಯಿತು.ಗಣೇಶ ಕಟ್ಟೆ ಪುಡಿ ಮಾಡಿದ ನೈಜ ಆರೋಪಿಯನ್ನು ಬಂಧಿಸಬೇಕು ಮತ್ತು ಪ್ರಕರಣದ ಮರು ತನಿಖೆ ಮಾಡಬೇಕು ಎಂದು ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಅವರು ತನ್ನ ದಿಕ್ಸೂಚಿ ಭಾಷಣದಲ್ಲಿ ಆಗ್ರಹಿಸಿದರು.

ಈ ಸಭೆಯಲ್ಲಿ  ಹಿ.ಜಾ.ವೇ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ , ಹಿ.ಜಾ.ವೇ ಮಾತೃ ಸುರಕ್ಷ ಪ್ರಮುಖ್  ಪ್ರಶಾಂತ್ ಕೆಂಪ್ಪುಗುಡ್ಡೆ,  ಹಿ.ಜಾ.ವೇ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಚಂದ್ರ ಕಲಾಯಿ ,ಮಲ್ಲೇಶ್ ಕಡಬ ,ರವಿಂದ್ರ ಕಡಬ, ರವಿ ಕೆಂಪ್ಪುಗುಡ್ಡೆ ಭರತ್ ಉದನೆ, ಸತೀಶ್

ಉದನೆ ,ಸುಜನ್ ಉದನೆ ಹಾಗು ಉದನೆ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ನೆಲ್ಯಾಡಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಉಪ್ಪಿನಂಗಡಿ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಕಿಶೋರ್ ಶಿರಾಡಿ ಕಾರ್ಯಕ್ರಮ  ನಿರೂಪಿಸಿದರು. ಬೃಹತ್ ಸಂಖ್ಯೆಯಲ್ಲಿ ಹಿಂದು ಸಮಾಜದ ಬಂಧುಗಳು ಮತ್ತು ಗಣೇಶ ದೇವರ ಭಕ್ತರು ಸೇರಿದ್ದರು.

Leave a Comment