ಇಂದು ಮಕರ ಸಂಕ್ರಾತಿಯಾದ ಕಾರಣ ದೆಹಲಿ ಮಾರುಕಟ್ಟೆಯಲ್ಲಿ ಜನರು ಹೂ,ಹಣ್ಣು ಖರೀದಿಯಲ್ಲಿ ಮುಳುಗಿದ್ದರು. ಒಮ್ಮೆಲೇ ಪೊಲೀಸರ ವಾಹನಗಳು ಬರ ತೊಡಗಿತು. ಜನರು ಮೊದಲಿಗೆ ಕೇರ್ ಮಾಡದೆ ತಮ್ಮ ತಮ್ಮ ಕೆಲಸದಲ್ಲಿ ಇದ್ದರು.ಆದರೆ ಯಾವಾಗ ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳ ಜೊತೆಗೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದಾಗ ಜನರೆಲ್ಲ ದಂಗಾದರು.ಅವರು ಬಂದ ಕಾರಣ ದೆಹಲಿಯ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆಯಾಗಿತ್ತು.
ಈ ಸುದ್ದಿ ಇಡೀ ರಾಜಧಾನಿಗೆ ಹಬ್ಬಿತ್ತು.ಬಾಂಬ್ ನಿಷ್ಕ್ರಿಯ ದಳ ಬಂದು ಬಾಂಬ್ ಸ್ಫೋಟಿಸುವಲ್ಲಿ ಯಶಸ್ವಿಯಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾತಿಳಿಸಿದ್ದಾರೆ.
ಹಬ್ಬದ ಸಂಭ್ರಮದಲ್ಲಿದ್ದವರಿಗೆ ಈ ಬಾಂಬ್ ವಿಚಾರ ಶಾಕ್ ನೀಡಿತ್ತು. ಮಂಡಿಯಲ್ಲಿ ಪತ್ತೆಯಾದ ಬಾಂಬ್ ಇದ್ದ ಚೀಲವನ್ನು ನೆಲದಲ್ಲಿ ಗುಂಡಿ ತೋಡಿ 8
ಅಡಿಗಳಷ್ಟು ಆಳದಲ್ಲಿ ಹೂತು ಹಾಕಲಾಯಿತು. ಇನ್ನೂ ಬಾಂಬ್ ಪತ್ತೆಯಾದ ಪ್ರದೇಶವನ್ನು ಎನ್ಎಸ್ಜಿ ತಂಡವು ಸುತ್ತುವರೆದಿದೆ. ಮತ್ತೆ ಎಲ್ಲಾದರೂ ಬಾಂಬ್ ಇಟ್ಟಿರಬಹುದಾ ಎಂದು ಹುಡುಕುತ್ತಿದೆ. . ಮೂಲಗಳ ಪ್ರಕಾರ, ಐಇಡಿಯನ್ನು ತೆರೆದ ಮೈದಾನದಲ್ಲಿ ಸ್ಫೋಟಿಸಲಾಗಿದೆ. ಆ ಚೀಲವನ್ನು ಮಾತ್ರ ಹೂತು ಹಾಕಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ















