ಎಲ್ಲರೂ ಕಾತುರದಿಂದ ಎದುರು ನೋಡುತ್ತಿರುವ ಐಪಿಎಲ್ ಪಂದ್ಯಾವಳಿಗಳು ಇನ್ನೇನು ಪ್ರಾರಂಭವಾಗುತ್ತದೆ ಈ ಬಾರಿಯ ಸೀಸನ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ ಪ್ರತಿದಿನ ಐಪಿಎಲ್ ಮ್ಯಾಚ್ ನೋಡುವುದು ಎಲ್ಲರ ಕಾಯಕವಾಗಿಬಿಟ್ಟಿದೆ .
ಆದರೆ ಅನೇಕ ಯುವಕರು ಈಗ ಐಪಿಎಲ್ ಹೆಸರಿನಲ್ಲಿ ಬೆಟ್ಟಿಂಗ್ ಆಡಲು ಶುರು ಮಾಡಿದ್ದಾರೆ.ಇದರಿಂದ ಅನೇಕ ಯುವಕರು ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟ ಅನುಭವಿಸುತ್ತಾರೆ .
ಐಪಿಎಲ್ ಬೆಟ್ಟಿಂಗ್ ಅಂದರೆ ಎಲ್ಲೆಲ್ಲಿಂದನೋ ಸಾಲ ಮಾಡಿ ಚಿನ್ನ ಬೆಳ್ಳಿ ವಾಹನಗಳನ್ನು ಗಿರಿವಿ ಇಟ್ಟು ಬೆಟ್ಟಿಂಗ್ ಕಟ್ಟಲು ತಮ್ಮಲ್ಲಿರುವ ಎಲ್ಲಾ ಸಿರಿಸಂಪತ್ತನ್ನು ಕಳೆದುಕೊಳ್ಳುತ್ತಾರೆ ಇದರಿಂದ ಜೀವನಕ್ಕೆ ಬಹಳ
ಅನಾಹುತವಾಗುತ್ತದೆ ಆದರೆ ದಯವಿಟ್ಟು ಐಪಿಎಲ್ ಪಂದ್ಯವನ್ನು ಆಟದ ರೀತಿ ನೋಡಿ ಎಂಜಾಯ್ ಮಾಡಿ. ಐಪಿಎಲ್ ಕ್ರಿಕೆಟ್ ಆಡುವ ಆಟಗಾರರು ತುಂಬಾ ಕಷ್ಟಪಟ್ಟು ಆಡುತ್ತಿರುತ್ತಾರೆ ಆದರೆ ನೀವು ಅದರಿಂದ ನಿಮ್ಮಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್ ಯುವಕರಿಗೆ ಮನವಿ ಮಾಡಿದ್ದಾರೆ.














