ಬಂಟ್ವಾಳ: ಎಸ್ ವಿ ಎಸ್ ಪದವಿ ಕಾಲೇಜಿನ ವಿದ್ಯಾರ್ಥಿನಿ ಸಹನಾ ಎಂ. ಶೆಟ್ಟಿ ಇವರು ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಗ್ಲೋಬಲ್ ಆರ್ಯಭಟ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿದರು.
ಬಂಟ್ವಾಳ ಎಸ್.ವಿ.ಎಸ್. ಪದವಿ ಕಾಲೇಜಿನ ವಿದ್ಯಾರ್ಥಿನಿ, ಭರತನಾಟ್ಯ ಕಲಾವಿದೆ ಸಹನಾ ಎಂ.ಶೆಟ್ಟಿ ಇವರಿಗೆ ಏಷ್ಯಾ ವೇದಿಕ್ ಕಲ್ಚರ್ ಫೌಂಡೇಶನ್ ಮತ್ತು ಏಷ್ಯಾ ವೇದಿಕ್ ಕಲ್ಚರ್ ರಿಸರ್ಚ್ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಸಾಧನೆಗಾಗಿ 'ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಶನಲ್ ಅವಾರ್ಡ್ ನೀಡಿ ಗೌರವಿಸಿದೆ.
ಭರತನಾಟ್ಯ
ವಿದ್ವತ್ ಮತ್ತು ಕರಾಟೆ ಬ್ಲ್ಯಾಕ್ ಬೆಲ್ಟ್ ಹೊಂದಿರುವ ಈಕೆ ಹರ್ಯಾಣದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು. ಕರಾಟೆ ಕುಮಿಟೆ ವಿಭಾಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಐದು ಬಾರಿ ಚಿನ್ನದ ಪದಕ ಇವರಿಗೆ ಒಲಿದು ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.















