ಮಧುಮಿತ ಕಡಂಬು

ಬಹುಮುಖ ಪ್ರತಿಭೆ ಅಂಜಲಿ ವಿ.ಕಾಸರಗೋಡು ಇವರಿಗೆ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ಅಂಗೀಕಾರ.

ಬಹುಮುಖ ‌ಪ್ರತಿಭೆ ಅಂಜಲಿ.ವಿ‌ . ಕಾಸರಗೋಡು ಇವರಿಗೆ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ‌ಅಂಗೀಕಾರ.

ಸಾಧಿಸುವ ಹಠವಿದ್ದರೆ ಒಂದಲ್ಲ ಹಲವು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಆದರೆ ಬೇಕಾದದ್ದು ತಾಳ್ಮೆ, ಆಸಕ್ತಿ, ದೃಢ ನಿರ್ಧಾರ ಇವುಗಳ ಸಮ್ಮಿಲನದ ಫಲವೇ ಸಾಧನೆ. ಇದಕ್ಕೆ ಉತ್ತಮ ಉದಾಹರಣೆ ಅಂಜಲಿ. ವಿ.ಕಾಸರಗೋಡು. ಇವರು ಪೈಕಿ ಕೀಬೋರ್ಡ್, ಹಾರ್ಮೋನಿಯಂ ವಾದಕಿ, ಗಾಯಕಿ, ಭರತನಾಟ್ಯದ ಕಲಾವಿದೆಯಾಗಿ ಗುರುತಿಸಿಕೊಂಡವರು. ಮೂಲತಃ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪೆರ್ಲದ ಯಜ್ಞಪುರುಷ ಮತ್ತು ಕಲಾವತಿ ದಂಪತಿಗಳ ಪುತ್ರಿ.

 ಎಳವೇ ಪ್ರಾಯದಲ್ಲಿಯೇ  ನೃತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರು, ಮೂರನೇ ತರಗತಿಯಲ್ಲಿ ಪೆರ್ಲದ ಶಿವಾಂಜಲಿ ನೃತ್ಯ ಕೇಂದ್ರದ ವಿಧುಷಿ ಕಾವ್ಯ ಭಟ್ ಪೆರ್ಲ ಇವರ ಗರಡಿಯಲ್ಲಿ  ಭರತನಾಟ್ಯ  ಹಾಗೂ ವಿದ್ಯಾಪಲ್ಲವಿ ಸಂಸ್ಥೆಯಿಂದ ಕರ್ನಾಟಿಕ್ ಕೀಬೋರ್ಡ್‌  ವಾದನವನ್ನು  ಕಲಿತರು.

ಶಾಸ್ತ್ರೀಯ ಸಂಗೀತವನ್ನು ನಟರಾಜ ಶರ್ಮರಲ್ಲಿ ಅಭ್ಯಸಿಸಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಹಮ್ಮಿಕೊಂಡ ಜೂನಿಯರ್ ವಿಭಾಗದ ಸಂಗೀತ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದಿರುತ್ತಾರೆ.

ಸಂಗೀತ ಮಾತ್ರವಲ್ಲದೆ, ಭಜನಾ ಸಂಕೀರ್ತನೆ ಮತ್ತು ಹಾರ್ಮೋನಿಯಂ  ವಾದನದಲ್ಲೂ ಎತ್ತಿದ ಕೈ ಅದಕ್ಕೆ ಸಾಕ್ಷಿ

ಶ್ರೀ ಶಂಕರ ಚಾನೆಲ್ ನಲ್ಲಿ ಪ್ರಕಟಗೊಂಡ "ಭಜನ್ ಸಾಮ್ರಾಟ್" ಕಾರ್ಯಕ್ರಮ.

 ಮುನಿಸುತರವಿ ಎಂಬ ಹಾಡಿಗೆ ಕೀಬೋರ್ಡ್ ವಾದಿಸಿ ಮತ್ತು  ಪಾಟುಪಾಡವ ಎಂಬ ತಮಿಳ್ ಹಾಡನ್ನು ಹಾಡಿ ಪ್ರೇಕ್ಷಕರ ಮನಸ್ಸು ಕದ್ದ ಇವರು, ಹಲವಾರು ಸಂಘಟನೆಗಳ ಅಭಿನಂದನೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ನಲ್ಲಿ ಅಂಜಲಿ ವಿ ಕಾಸರಗೋಡು ಎಂಬ ಚಾನೆಲ್ ಮತ್ತು ಪೇಸ್ ಬುಕ್ ನಲ್ಲಿ ಅಂಜಲಿ ವಿ ಕಾಸರಗೋಡು  ಪೇಜ್ ನಲ್ಲಿ ಕೀಬೋರ್ಡ್ ವಾದನ, ಸಂಗೀತದ ತುಣುಕುಗಳನ್ನು ಹಂಚಿಕೊಳ್ಳತ್ತಿದ್ದಾರೆ. ಬೇರೆ ಚಾನಲ್  ವಾಯ್ಸ್ ಆಫ್ ಆರಾಧನಾ ಮತ್ತಿತ್ತರ ಜಾಲತಾಣಗಳಲ್ಲಿ ಲೈವ್ ಸಂದರ್ಶನ, ಸಂಗೀತ, ಕೀಬೋರ್ಡ್ ಮುಂತಾದವುಗಳಲ್ಲಿ ಭಾಗವಹಿಸಿ, ಎಲ್ಲರ ಪ್ರಶಂಸೆಗೆ ಭಾಜನರಾಗಿದ್ದಾರೆ.

ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವೆಡೆಯಲ್ಲಿ ಭರತನಾಟ್ಯ, ಸಂಗೀತ, ಕೀಬೋರ್ಡ್ ವಾದಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

 ಬಿಳಿ‌ ಹಾಳೆಯಲ್ಲಿ ಕವನವನ್ನು ಗೀಚುವ ಇವರು ಹಾಡೊಂದನ್ನು ರಚಿಸಿ ಮ್ಯೂಸಿಕ್ ಡೈರೆಕ್ಟರ್ ಎಂಬ ಬಿರುದು ಮಾತ್ರವಲ್ಲದೆ, ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ಅಂಗೀಕಾರ ದೊರೆತದ್ದು ಹೆಮ್ಮೆಯ ವಿಚಾರ.

   ಪ್ರಸ್ತುತ ಹತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುವ ಇವರಿಗೆ ಸಂಗೀತ ನಿರ್ದೇಶಕಿ ಆಗುವ ಹಂಬಲ.

    

 

Leave a Comment