ಚಿಟ್ಟಾಣಿಯ ದೇಸಿ ಸ್ಟೈಲ್ - ಉಸೇನ್ ಬೋಲ್ಟ್ ನ ವಿದೇಶಿ ಸ್ಟೈಲ್
ಚಿಟ್ಟಾಣಿಯ ದೇಸಿ ಸ್ಟೈಲ್ - ಉಸೇನ್ ಬೋಲ್ಟ್ ನ ವಿದೇಶಿ ಸ್ಟೈಲ್
ನೀಲ ಗಗನದೊಳು... ಮೇಘಗಳು... ಮೇಘಗಳು... ನವಿಲು ಕುಣಿಯುತ್ತಿದೆ ನವಿಲು ಕುಣಿಯುತ್ತಿದೆ ನೋಡೋ... ನೋಡೋ... ಈ ಯಕ್ಷಗಾನ ಹಾಡು ಕಾಳಿಂಗ ನಾವುಡರ ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ರೆ ಯಕ್ಷಗಾನ ಅಭಿಮಾನಿಗಳು ತನ್ಮಯದಿಂದ ಆಲಿಸುತ್ತಿರುತ್ತಾರೆ...ಆದ್ರೆ ಈ ಹಾಡಿಗೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ನೃತ್ಯ ಮಾಡುತ್ತಿದ್ದಾರೆ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿಯುತ್ತಿರುತ್ತಾರೆ...ಅದರಲ್ಲೂ ಮೊದಲ ಸಾಲು ನೀಲ ಗಗನ ಅನ್ನೋ ಪದ ಕೇಳಿಬರುತ್ತಿದ್ದಂತೆ ಚಿಟ್ಟಾಣಿಯವರು ಬಾಣದಂತೆ ಬಾಗಿ ಕೈಯನ್ನು ಆಕಾಶಕ್ಕೆ ತೋರಿಸುವ ಶೈಲಿಯನ್ನು ವರ್ಣಿಸಲು ಅಸಾಧ್ಯ...ಆದ್ರೆ ಚಿಟ್ಟಾಣಿಯವರ ಈ ದೇಸಿ ಸ್ಟೈಲ್ ಈಗ ಜಗತ್ತಿನಲ್ಲೇ ಪ್ರಚಲಿತದಲ್ಲಿದೆ.
iಇನ್ನು ಕೌರವನ ಪಾತ್ರದಲ್ಲಿ ನಿನ್ನಯ ಹಾಡಿಗೂ ಅಷ್ಟೇ... ಸಾಯುವ ಸ್ಥಿತಿಯಲ್ಲೂ ಹೆದರದೇ ತನ್ನ ಛಲ, ಹಠವನ್ನು ಸಾಧಿಸುವ ದುರ್ಯೋದನನ ಪಾತ್ರಕ್ಕೆ ಜೀವ ತುಂಬಿದವರು ಚಿಟ್ಟಾಣಿ ರಾಮಚಂದ್ರ ಹೆಗಡೆ... ಪಾಂಡವರನ್ನು ಅದರಲ್ಲೂ ಭೀಮನನ್ನು ಅಣಕಿಸುವ ದೃಶ್ಯದಲ್ಲೂ ಚಿಟ್ಟಾಣಿ ಬಾಣದಂತೆ ಬಾಗಿಕೊಂಡು ಕೈಯಲ್ಲಿ ಆಕಾಶವನ್ನು ತೋರಿಸುವ ಶೈಲಿ ಪ್ರೇಕ್ಷಕರಿಗೆ ಮುದ ನೀಡುತ್ತೆ... ಅಷ್ಟೇ ಅಲ್ಲ, ಇಡೀ ಸಭಾಂಗಣದಲ್ಲಿ ಈ ಶೈಲಿಯನ್ನು ನೋಡಿ ಆನಂದಿಸುತ್ತ ಸಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಗುತ್ತೆ..
ತಮ್ಮ ವಿಭಿನ್ನ ಶೈಲಿಯ ಮೂಲಕ ಯಕ್ಷಗಾನ ಕಲೆಗೆ ಜೀವ ತುಂಬಿದವರು ಚಿಟ್ಟಾಣಿ ರಾಮಚಂದ್ರ ಹೆಗಡೆ... ಸುಮಾರು 65 ವರ್ಷಗಳಿಂದ ಯಕ್ಷಗಾನ ಕಲೆಯನ್ನೇ ತನ್ನ ಉಸಿರಾಗಿಸಿಕೊಂಡಿರುವ ಚಿಟ್ಟಾಣಿಯವರು ಇಂದು ಕೂಡ ತಮ್ಮ ಹಾವ ಭಾವಗಳಿಂದಲೇ ಅಭಿಮಾನಿಗಳನ್ನು ರಂಜಿಸುವ ಕಲಾವಿದ.
ಆದ್ರೆ ಚಿಟ್ಟಾಣಿಯವರ ಈ ಶೈಲಿ ಇದೆಯಲ್ಲಾ.. ಕೇವಲ ಯಕ್ಷಗಾನ ಅಭಿಮಾನಿಗಳಿಗೆ ಮಾತ್ರ ಗೊತ್ತಾಗುತ್ತಿದೆ.. ಚಿಟ್ಟಾಣಿ ಸ್ಟೈಲ್, ಚಿಟ್ಟಾಣಿ ಶೈಲಿ ಬೇರೆ ಬೇರೆ ಸಿನಿಮಾ ನಟರ ಅಥವಾ ಸೆಲೆಬ್ರಿಟಿಗಳ ಸ್ಟೈಲ್ನಂತೆ ಪ್ರಚಾರ ಪಡೆದುಕೊಂಡಿಲ್ಲ.. ಆದ್ರೂ ಚಿಟ್ಟಾಣಿ ಅವ್ರ ಶೈಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ.
ಹೌದು, ನಮ್ಮ ವಿಶ್ವ ಅಥ್ಲೆಟಿಕ್ಸ್ ರಂಗದ ಸುನಾಮಿ ಜಮೈಕಾದ ಉಸೇನ್ ಬೋಲ್ಡ್ ಗೆಲುವಿನ ಸಂಭ್ರಮವನ್ನು ಆಚರಿಸಿಕೊಳ್ಳುವುದು ಕೂಡ ನಮ್ಮ ಚಿಟ್ಟಾಣಿ ಸ್ಟೈಲ್ನಲ್ಲೇ... ಚಿರತೆಯನ್ನು ನಾಚಿಸುವಂತೆ ಓಡಿ ಗೆಲುವಿನ ಗೆಲುವಿನ ಗುರಿ ಮುಟ್ಟಿದ ಬಳಿಕ ಕುಣಿದುಕೊಂಡು ಓಡಾಡುವ ಉಸೇನ್ ಬೋಲ್ಟ್, ಅಭಿಮಾನಿಗಳತ್ತ ಬಿಲ್ಲಿನಂತೆ ಬಾಗಿ ಆಕಾಶಕ್ಕೆ ಕೈ ತೋರಿಸುವ ಶೈಲಿಯನ್ನು ನೋಡಿದಾಗ ತಕ್ಷಣವೇ ಚಿಟ್ಟಾಣಿಯವರು ನೆನಪಾಗುತ್ತಾರೆ.
ಹಾಗಂತ ಇಲ್ಲಿ ಯಾರು ಯಾರನ್ನು ಕಾಪಿ ಮಾಡಿಲ್ಲ.. ಇಬ್ಬರಲ್ಲೂ ಸಾಮ್ಯತೆ ಇದೆಯಷ್ಟೇ.. ಎಲ್ಲಿಯ ಉತ್ತರ ಕನ್ನಡ.. ಎಲ್ಲಿಯ ಜಮೈಕಾ. ಆದ್ರೂ ಈ ಶೈಲಿಯ ರೂವಾರಿ ನಮ್ಮ ರಾಮಚಂದ್ರ ಚಿಟ್ಟಾಣಿ ಎಂಬುದೇ ಖುಷಿ,, ಹೆಮ್ಮೆ.. . ಆದ್ರೆ ಉಸೇನ್ ಬೋಲ್ಟ್ ಈ ಶೈಲಿಯ ಮೂಲಕವೇ ಎಲ್ಲೇ ಹೋದ್ರೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಅಭಿಮಾನಿಗಳು ಕೂಡ ಇದೇ ಶೈಲಿಯನ್ನು ಅನುಕರಣೆ ಮಾಡುತ್ತಾರೆ.. ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಯುವರಾಜ್ ಸಿಂಗ್ ಕೂಡ ಚಿಟ್ಟಾಣಿ - ಬೋಲ್ಟ್ ಶೈಲಿಯನ್ನೇ ಅನುಕರಣೆ ಮಾಡಿದ್ರು. ಏನೇ ಆದ್ರೂ ಹಿತ್ತಲ ಗಿಡ ಮದ್ದಲ್ಲ ಅನ್ನೋದು ಅಷ್ಟೇ ಸತ್ಯ..
ಥ್ಯಾಂಕ್ಸ್ ಟು ಅನಿತ್ ಕುಮಾರ್
(ಸೂಚನೆ:ಸಂದರ್ಭಕ್ಕೆ ತಕ್ಕಂತೆ ಬರೆದ ಪ್ಲಾಶ್ ಬ್ಯಾಕ್ ಸ್ಟೋರಿ)
ಸನತ್ ರೈ
UnhideWhenUsed="false" Name="Colorful List Accent 1"/>















