Coastal Bulletin

ಪುತ್ತೂರು:ಬೆಂ‌ಗಳೂರು ಮಂಗಳೂರು ರೈಲು ಸಂಚರಿಸುತ್ತಿರುವಾಗಲೇ ದರೆ ಕುಸಿದು ಮಣ್ಣು ಹಳಿ ಮೇಲೆ ಬಿದ್ದ ಪರಿಣಾಮ ರೈಲಿನ ಗಾರ್ಡ್ ಗೆ ಹಾನಿಯಾದ ಘಟನೆ ವೀರಮಂಗಲ ದಲ್ಲಿ ನಡೆದಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ನೈರುತ್ಯ ರೈಲ್ವೇ ಸಾರ್ವಜನಿಕ ಸಂಪರ್ಕ ಅಧಿಕಾರಿ 'ಇಂದು ಬೆಳಗ್ಗೆ ಮಂಗಳೂರಿನಿಂದ ಹೊರಟ ರೈಲು ಕಬಕ ಪುತ್ತೂರು ಹಾಗೂ ಸುಬ್ರಹ್ಮಣ್ಯ ಮಧ್ಯೆ ಸಂಚರಿಸುತ್ತಿರುವ ವೇಳೆ ಗುಡ್ಡ ಕುಸಿದಿದೆ. ರೈಲು ಸುಮಾರು ೪೦ ನಿಮಿಷ ಕಾಲ ಸ್ಥಳದಲ್ಲೇ ಬಾಕಿಯಾಗಿತ್ತು. ಸಣ್ಣ ಪ್ರಮಾಣದ ಕುಸಿತವಾಗಿದ್ದು,ರೈಲು ಚಾಲಕರಿಗೆ ಮೊದಲೇ

ಗೊತ್ತಾದ ಕಾರಣ ರೈಲನ್ನು ಯಶಸ್ವಿಯಾಗಿ ನಿಲ್ಲಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿ ಪ್ರಸ್ತುತ ರೈಲು ಪ್ರಯಾಣ ಮುಂದುವರಿಸಿದೆ' ಎಂದರು

ಕಳೆದ ನಾಲ್ಕು ದಿನಗಳಿಂದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಶುಕ್ರವಾರವಷ್ಟೇ ಮಂಗಳೂರಿನ ಕುಲಶೇಖರದಲ್ಲಿ ಭೂಕುಸಿತದಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದು ಇಂದು(ಆದಿತ್ಯವಾರ)ಬೆಳಗ್ಗೆಯಷ್ಟೇ ದುರಸ್ತಿಯಾಗಿತ್ತು.

Leave a Comment