Coastal Bulletin

ಬದಿಯಡ್ಕ:ನೂರಾರು ಕುಟುಂಬಗಳಿಗೆ ಸೂರು ಕಲ್ಪಿಸಿದ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಇಂದು ಮಧ್ಯಾಹ್ನ ನಮ್ಮನ್ನು ಅಗಲಿದ್ದಾರೆ.

ನೂರಾರು ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದ್ದು ಮಾತ್ರವಲ್ಲದೆ, ಸ್ವಂತ ಖರ್ಚಿನಲ್ಲೇ 265 ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟ ದಾನಿ ಇವರು. ಇದರ ಜೊತೆಗೆ ಉಚಿತ ಆರೋಗ್ಯ ಏರ್ಪಡಿಸಿದ್ದರು. ಸಾಯಿ ಮಂದಿರವನ್ನು ತಮ್ಮ ಸ್ವಗ್ರಾಮದಲ್ಲಿ ಕಟ್ಟಿಸಿದ್ದಾರೆ.ಜೋತಿಷ್ಯ ಮತ್ತು ಆಯುರ್ವೇದ

ದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರು ಸಾಯಿರಾಂ ಜೋತಿಷ್ಯ ಎಂದೇ ಪ್ರಸಿದ್ಧಿ ಹೊಂದಿದ್ದರು.

ಮೃತರು ಪತ್ನಿ ಶಾರದಾ ಭಟ್, ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಪುತ್ರ ಕೆ.ಎನ್.ಕೃಷ್ಣ ಭಟ್ ,ಪುತ್ರಿಯರಾದ ಶ್ಯಾಮಲಾ, ವಸಂತಿರನ್ನು ಅಗಲಿದ್ದಾರೆ.

Leave a Comment