Coastal Bulletin

ಮಂಗಲ್ಪಾಡಿ: ಹರೀಶ್ ಬಳಂತಿಮೊಗರು ಇವರ ಸ್ವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಹಿರಿಯ ಸಾಧಕರಿಗೆ ಸಂಮಾನ ಮತ್ತು ತಾಳಮದ್ದಳೆ ಸಪ್ತಾಹ ಮಾರ್ಚ್ 27 ರಿಂದ ಎಪ್ರಿಲ್ 2 ರ ತನಕ ಸಾಕ್ಷಾತ್ಕಾರ ಮನೆಯ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ, 

ಮಾ.27 ರಂದು ಸಂಜೆ 5  ಗಂಟೆಗೆ "ಯಕ್ಷ ಶ್ರೀಹರಿ " ತಂಡ ಮಂಗಳೂರು ಇವರಿಂದ ಗುರು ಕಾರುಣ್ಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಮಾ.28 ರಂದು ಪೊನ್ನೆತ್ತೋಡಿ ಮಹಿಳಾ ಯಕ್ಷ ಕೂಟದ ವತಿಯಿಂದ ಕರ್ಣಾವಸಾನ ಎಂಬ ಯಕ್ಷಗಾನ ತಾಳಮದ್ದಳೆ ಜರಗಲಿದೆ.

ಮಾ.29 ರಂದು  ತಡಂಬೈಲ್ ಸುರತ್ಕಲ್ ಶ್ರೀ  ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯಿಂದ ರುಕ್ಮಿಣಿ ಸ್ವಯಂವರ ನಡೆಯಲಿದೆ.

ಮಾ. 30

ಕ್ಕೆ ನಿರ್ಜಾಲು ಯಕ್ಷ ಭಾರತೀ ಇವರಿಂದ ಸುದರ್ಶನ ವಿಜಯ ಯಕ್ಷಗಾನ ತಾಳಮದ್ದಳೆ ಮೂಡಿಬರಲಿದೆ.

ಮಾ.31 ರಂದು ಸುರತ್ಕಲ್ ನ ಯಕ್ಷಕಲಾ ಮಹಿಳಾ ತಂಡದಿಂದ ದಕ್ಷ ಯಜ್ಞ ನಡೆಯಲಿದೆ.

ಎ.1 ಕ್ಕೆ ಮೀಯಪದವು ಶ್ರೀ ಗುರುನರಸಿಂಹ ಯಕ್ಷ ಬಳಗದಿಂದ ಶ್ರೀ ಕೃಷ್ಣ ಪರಂಧಾಮ‌ ಯಕ್ಷಗಾನ ತಾಳಮದ್ದಳೆ ಜರಗಲಿದೆ.

ಎ.2 ರಂದು ಯಕ್ಷ ಮೌಕ್ತಿಕ‌ ಮಹಿಳಾ ಮಂಗಲ್ಪಾಡಿ ಇವರಿಂದ ಶಾಪಾನುಗ್ರಹ ತಾಳಮದ್ದಳೆ ನಡೆಯಲಿದೆ.

Leave a Comment