ವರದಕ್ಷಿಣೆ ಕಿರುಕುಳದಿಂದ ವಿಸ್ಮಯಾ ಎಂಬ ಯುವತಿ ಆತ್ಮಹತ್ಯೆ ಮಾಡಿರುವ ಘಟನೆ ಇಡೀ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದು, ಇದೀಗ ಆತ್ಮಹತ್ಯೆ ಪ್ರಕರಣಕ್ಕೆ ಅಂತಿಮ ತೀರ್ಪು ಸಿಕ್ಕಿದೆ.
ಜೂನ್ ನಲ್ಲಿ ಆತ್ಮಹತ್ಯೆ ಮಾಡಿದ 22 ವರ್ಷದ ವ್ಯೆದ್ಯಕೀಯ ವಿದ್ಯಾರ್ಥಿ ವಿಸ್ಮಯಾ ವಿ ನಾಯರ್ ಳ ಪತಿಯನ್ನು ಕೇರಳದ ನ್ಯಾಯಾಲಯ ವರದಕ್ಷಿಣೆ ಕಿರುಕಳ ಪ್ರಕರಣದಲ್ಲಿ ಅಪರಾಧಿ ಎಂದು ಸೋಮವಾರ ತೀರ್ಪು ನೀಡಿದೆ.
ಶಿಕ್ಷೆಯ ಪ್ರಮಾಣ ಮಂಗಳವಾರ ಪ್ರಕಟಿಸಲಾಗುವುದು. ವಿಸ್ಮಯಾ ತಂದೆ ತನ್ನ ಮಗಳಿಗೆ ನ್ಯಾಯ ಸಿಕ್ಕಿತ್ತು ಎಂದು ನ್ಯಾಯಾಲಯದ ಹೊರಗೆ ಬಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.