ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನ, ಕುಮ್ಡೆಲ್ ಪುದು-ತುಂಬೆ, ಇದರ ಪ್ರತಿಷ್ಠಾ ವರ್ಧಂತಿ ಉತ್ಸವವು ಎ.21ನೇ ಮಂಗಳವಾರ ನಡೆಯಲಿದೆ.
ಕಾರ್ಯಕ್ರಮಗಳ ವಿವರ :
ಅಂದು ಬೆಳಿಗ್ಗೆ 8.00 ರಿಂದ ನಾಗದೇವರಿಗೆ ತಂಬಿಲ, ಅಶ್ಲೇಷ ಬಲಿಸೇವೆ,ಬೆಳಿಗ್ಗೆ 10.30 ರಿಂದ ಶ್ರೀ ಕೋರ್ದಬ್ಬು ದೈವದ ದರ್ಶನ ಸೇವೆ, ಬೆಳಿಗ್ಗೆ 11.45
ರಿಂದ ಜಾಗದ ಗುಳಿಗ ದೈವದ ಗಗ್ಗರ ಸೇವೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತಸರ ಭಾಸ್ಕರ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













