ಬಂಟ್ವಾಳ :ಕಳ್ಳಿಗೆ ಗ್ರಾಮದ ಯುವಕರ ಸಂಘ ಮತ್ತು ಕಳ್ಳಿಗೆ ಗ್ರಾಮದ ಮಹಿಳಾ ಸಂಘ. ಇದರ 42ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಎ.18ನೇ ಶನಿವಾರ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಂಜೆ ಕನಪಾಡಿ ಕನಪಾಡಿತ್ತಾಯ ದೈವದ ಪಾತ್ರಿ ಧೂಮ ಮೂಲ್ಯ ಇವರು ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಆಧುನಿಕ ಸಮಾಜ ವೇಗವಾಗಿ ಬೆಳೆಯುತ್ತಿದ್ದು ನಾವು ಪರಿವರ್ತನ ಕಾಲಘಟ್ಟದಲ್ಲಿ ಬದುಕುತಿದ್ದೇವೆ, ಸಂಘ ಸಂಸ್ಥೆಗಳು ಬಡವರಿಗೆ ದುರ್ಬಲರಿಗೆ ಸಹಕಾರ ನೀಡುವುದರೊಂದಿಗೆ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು,ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು, ಸಮಾಜದಲ್ಲಿ ಎಲ್ಲಾ ವರ್ಗದ ಜನರು ಬಲಿಷ್ಠರಾದರೆ ಮಾತ್ರ ದೇಶ ಸದೃಢವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಮಾಜಿ ಜಿ ಪಂ ಸದಸ್ಯ ಚಂದ್ರ ಪ್ರಕಾಶ ಶೆಟ್ಟಿ ತುಂಬೆ, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಕರಿಯಂಗಳ ಗ್ರಾ ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಜ್ಯೋತಿಷಿ ಅನಿಲ್ ಪಂಡಿತ್, ನಿವೃತ್ತ ಸೈನಿಕ ಹರೀಶ್ ಡಿ. ಬಂಟ್ವಾಳ ಮಾತನಾಡಿದರು.
ವೇದಿಕೆಯಲ್ಲಿ ಕೆ ಶಿವರಾಮ ಶಿಬಿರಾಯ ಪ್ರಧಾನ
ಅರ್ಚಕರು, ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು,ಗಣೇಶ ಜಿ ಕರ್ಕೇರ ಕೋಶಾಧಿಕಾರಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಸಮಾಜ ಸೇವಕಿ ಪ್ರಿಯದರ್ಶಿನಿ ದರಿಬಾಗಿಲು, ವಿನೋದ ಗಿರಿಯಪ್ಪ ಬದ್ಯಾರು,ಯುವಕ ಸಂಘದ ಅಧ್ಯಕ್ಷ ಶಶಿಧರ ಕನಪಾಡಿ, ಮಹಿಳಾ ಮಂಡಲದ ಅಧ್ಯಕ್ಷೆ ಸುಜಿತಾ ದೇವಂದಬೆಟ್ಟು, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಮನೋಜ್ ಕನಪಾಡಿ, ಸುಧೀರ್ ಕುಮಾರ್ ಜಾರಂದಗುಡ್ಡೆ, ಮಲ್ಲಿಕಾ ಜ್ಯೋತಿಗುಡ್ಡೆ,ದಕ್ಷಿಣ್ ದೇವಂದಬೆಟ್ಟು,ಯಶ್ವಿನಿ ಜಾರಂದಗುಡ್ಡೆ,ಸಾನಿಕಾ ಕಂಜತ್ತೂರು, ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಕ್ರೀಡಾ ಸಾಧನೆಗಾಗಿ ಇಶಾ ಅನ್ವಿ ಇವರನ್ನು ಅಭಿನಂದಿಸಲಾಯಿತು.
ಯುವಕ ಸಂಘದ ಮಾಜಿ ಅಧ್ಯಕ್ಷ ಜಗದೀಶ ಕಂಜತ್ತೂರು ಪ್ರಾಸ್ತವಿಕ ಮಾತನಾಡಿದರು,ಚಂದ್ರಹಾಸ ದೇವಂದಬೆಟ್ಟು ಸ್ವಾಗತಿಸಿ,ಪ್ರಶಾಂತ್ ಕನಪಾಡಿ ಧನ್ಯವಾದವಿತ್ತು, ಮನೋಜ್ ಕನಪಾಡಿ ಹಾಗೂ ಸೌಮ್ಯ ಮನೋಜ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ,ಜಾದೂ ಪ್ರದರ್ಶನ, ಚೈತನ್ಯ ಕಲಾವಿದರು ಬೈಲೂರು ಇವರಿಂದ 'ರಾಘು ಮಾಸ್ಟ್ರು' ಹಾಸ್ಯಮಯ ನಾಟಕ ಜರುಗಿತು.













