ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ

Coastal Bulletin
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ

ತಿರುವನಂತಪುರಂ: ಚುನಾವಣೆ ಹೊಸ್ತಿಲಲ್ಲಿರುವ ಕೇರಳದಲ್ಲಿ ಕೇರಳಸ್ಟೋರಿ 2 (Kerala Story 2) ಸಿನಿಮಾ ರಾಜಕೀಯ ವಸ್ತುವಾಗಿದೆ. ಸೆನ್ಸಾರ್ ಮಂಡಳಿ ಯುಎ ಸರ್ಟಿಫಿಕೇಟ್ ಕೊಟ್ಟಿದ್ದು, ಫೆ.27ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ಚಿತ್ರದಲ್ಲಿ ಕೇರಳದ ಜಾತ್ಯತೀತ ಮೌಲ್ಯಗಳಿಗೆ ವಿಷಕಾರುವ, ಧಾರ್ಮಿಕ ಸೌಹಾರ್ಧತೆಗೆ ಧಕ್ಕೆ ಅಂಶಗಳಿವೆ. ಹೀಗಾಗಿ ಚಿತ್ರವನ್ನು ಬಹಿಷ್ಕರಿಸಿ ಎಂದು ಜನತೆಗೆ ಸಿಎಂ ಪಿಣರಾಯಿ (Pinarayi Vijayan) ಕರೆ ನೀಡಿದ್ದಾರೆ.

ಪಿಣರಾಯಿ ವಿಜಯನ್‌ಗೆ ತಿರುಗೇಟು ನೀಡಿರುವ ಬಿಜೆಪಿ ಜನತೆಗೆ ಬೆದರಿಕೆ ಹಾಕುವ ಬದಲು ನ್ಯಾಯಾಲಯಕ್ಕೆ ಹೋಗಿ ಎಂದಿದೆ.

ಸಿನಿಮಾದ ಬಗ್ಗೆ ಚರ್ಚೆ ಜೋರಾಗುತ್ತಿದ್ದಂತೆ ಕಣ್ಣೂರು ಮೂಲದ ಶ್ರೀದೇವ್ ನಂಬೂದಿರಿ

ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಕೇರಳವನ್ನು ಕೆಟ್ಟದಾಗಿ ಬಿಂಬಿಸಿರುವ, ಕೋಮು-ಪ್ರಾದೇಶಿಕ ಸಂಘರ್ಷಕ್ಕೆ ಎಡೆಮಾಡಿಕೊಡುವ, ಶಾಂತಿ ಸುವ್ಯವಸ್ಥೆಕ್ಕೆ ಧಕ್ಕೆ ತರುವ ಅಂಶಗಳು ಟ್ರೇಲರ್‌ನಲ್ಲಿ ಕಂಡಿದೆ. ಹೀಗಾಗಿ, ಫಿಲ್ಮ್ ಸರ್ಟಿಫಿಕೇಟ್ ಕ್ಯಾನ್ಸಲ್ ಮಾಡಿ, ಚಿತ್ರ ಬಿಡುಗಡೆಗೆ ತಡೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಸಿಬಿಎಫ್‌ಸಿಗೆ ಕೇರಳ ಹೈಕೋರ್ಟ್ ‌ ನೋಟಿಸ್‌  ಕೊಟ್ಟಿದ್ದು ಫೆ.24ಕ್ಕೆ ವಿಚಾರಣೆಗೆ ಬರಲಿದೆ.

Leave a Comment