ಕಾಸರಗೋಡು: ಇತ್ತೀಚೆಗೆ ಅನುಮಾನಾಸ್ಪದವಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಸಂಘ ಪರಿವಾರದ ಯುವ ನಾಯಕ ಜ್ಯೋತಿಷ್ ಕುಮಾರ್ ಹಾಗೂ ಹಿಂದುತ್ವಕ್ಕೋಸ್ಕರ ತ್ಯಾಗಮಾಡಿದ ಬಲಿದಾನಿಗಳಿಗೆ ಅವಮಾನ ಆಗಿದೆ ಎನ್ನಲಾದ ಕುಂಬಳೆ ಪಂಚಾಯತ್ ಸ್ಟಾಂಡಿಂಗ್ ಕಮಿಟಿಯವರು ಎಡರಂಗದೊಂದಿಗೆ ಅಪವಿತ್ರ ಮೈತ್ರಿ ಮಾಡಿದ್ದಾರೆ ಹಾಗೂ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿ ಹಿಂದೂ ಕಾರ್ಯಕರ್ತರು ಇಂದು ಕಾಸರಗೋಡು ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಿದ್ದಾರೆ.
ಕುಂಬಳೆ ಪಂಚಾಯಿತಿಯಲ್ಲಿ ಸಿಪಿಎಂ ಜೊತೆಗಿನ ಮೈತ್ರಿಗೆ ಸಂಬಂಧಿಸಿದಂತೆ ಕಾರ್ಯಕರ್ತರು ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಅವರು ತಮ್ಮೊಂದಿಗೆ ನೇರಾ ನೇರ ಚರ್ಚೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುರೇಂದ್ರನ್ ಇಂದು
ಕಾಸರಗೋಡು ತಲುಪಲಿದ್ದಾರೆ ಎಂದು ಸ್ವತಃ ಬಿಜೆಪಿ ಮುಖಂಡ ಹರಿ ಎಸ್ ಕರ್ತಾ ಹೇಳಿದ್ದರು ಆದರೆ ಇದುವರೆಗೆ ಸುರೇಂದ್ರನ್ ಅವರು ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮುತ್ತಿಗೆ ಹಾಕಿದ್ದಾರೆ.














