ಆಲಪ್ಪುಳ: ಜಿಲ್ಲೆಯ ಹರಿಪಾಡ್ ಪ್ರದೇಶದಲ್ಲಿ ಯುವ ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬ 'ತಾಳಂ' ನೃತ್ಯ ಮಾಡಲು ತೆರಳಿದ್ದ ಸಮೀಪದ ದೇವಸ್ಥಾನದಲ್ಲಿ ಜಗಳವಾಡಿದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದ ಘಟನೆ ಬುಧವಾರ ರಾತ್ರಿ 11.30ಕ್ಕೆ ನಡೆದಿದೆ.
ಬುಧವಾರ ರಾತ್ರಿ 11.30ರ ಸುಮಾರಿಗೆ ಶರತ್ ಚಂದ್ರನ್ ತನ್ನ ಕೆಲವು ಸ್ನೇಹಿತರೊಂದಿಗೆ ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದಾಗ , ಈ ಘಟನೆ ನಡೆದಿದ್ದು ಇದರಲ್ಲಿ ಚಂದ್ರನ್ ಗೆ ಚೂರಿ ಇರಿದ ಕಾರಣ ಆತ ಸಾವ್ನಪ್ಪಿದ್ದಾನೆ.
7 ರಿಂದ 8 ಮಂದಿ ದುಷ್ಕರ್ಮಿಗಳ
ಪೈಕಿ ಇಬ್ಬರನ್ನು ಗುರುತಿಸಿ, ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ಆರೋಪಿಗಳು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು, ಅವರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ, ಆದರೆ ಅವರು ಯಾವುದೇ ಡ್ರಗ್ ಮಾಫಿಯಾದ ಭಾಗವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.














